ಮುಂದಿನ ಪರೀಕ್ಷೆ ಗಾಗಿ ಹಾಗು ಅದನ್ನು ನಿಷ್ಕ್ರಿಯಗೊಳಿಸಲು ಎನ್’ಎಸ್’ಜಿ ತಂಡವನ್ನು ಕರೆಸಲಾಗಿದೆ.

ನವದೆಹಲಿ (ಜ.28): ದೆಹಲಿಯ ಹಳ್ಳಿಯೊಂದರಲ್ಲಿ ಮಾರ್ಟರ್ ಶೆಲ್’ವೊಂದು ಪತ್ತೆಯಾಗಿದ್ದು, ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್’ಎಸ್’ಜಿ) ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ.

ದೆಹಲಿಯ ವಸಂತ್ ಕುಂಜ್ ಸಮೀಪದ ಕಿಶನ್’ಗಢದಲ್ಲಿ ಮಾರ್ಟರ್ ಶೆಲ್ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದಿನ ಪರೀಕ್ಷೆ ಗಾಗಿ ಹಾಗು ಅದನ್ನು ನಿಷ್ಕ್ರಿಯಗೊಳಿಸಲು ಎನ್’ಎಸ್’ಜಿ ತಂಡವನ್ನು ಕರೆಸಲಾಗಿದೆ.

ಮೇಲ್ನೋಟಕ್ಕೆ ಹಳೆಯ ಹಾಗೂ ತುಕ್ಕು ಹಿಡಿದಂತೆ ಕಾಣುತ್ತಿರುವ ಶೆಲ್ ಮೇಲೆ ಸ್ಥಳೀಯ ಬಾಂಬ್ ನಿಷ್ಕ್ರೀಯ ದಳವು ‘ಬಾಂಬ್ ಬ್ಲಾಂಕೆಟ’ನ್ನು ಹೊದಿಸಿದೆ.