2004ರ ಲೋಕಸಭೆಯಲ್ಲಿ ವಾಜಪೇಯಿ ಕೊನೆಯದಾಗಿ ಮತದಾನ ಮಾಡಿದ್ದರು

ಲಖನೌ(ಸೆ.29): ಉತ್ತರ ಪ್ರದೇಶದಲ್ಲಿ ಶೀಘ್ರವೇ ನಡೆಯಲಿರುವ ಮುನ್ಸಿಪಲ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತದಾನ ಮಾಡುವಂತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾಕೆಂದರೆ, ಲಖನೌನ ಮತದಾರರ ಪಟ್ಟಿಯಿಂದ ವಾಜಪೇಯಿ ಹೆಸರನ್ನು ಕೈಬಿಡಲಾಗಿದೆ. ಲಖನೌನ ಬಾಬು ಬನ್ಸಾರಿ ದಾಸ್ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ವಾಜಪೇಯಿ ಹೆಸರಿತ್ತು. ಈ ವಾರ್ಡ್‌ನಿಂದ 2004ರ ಲೋಕಸಭೆಯಲ್ಲಿ ವಾಜಪೇಯಿ ಕೊನೆಯದಾಗಿ ಮತದಾನ ಮಾಡಿದ್ದರು ಮತ್ತು ಮುನ್ಸಿಪಲ್ ಚುನಾವಣೆಗೆ 2000ರಲ್ಲಿ ಕೊನೆಯದಾಗಿ ಮತದಾನ ಮಾಡಿದ್ದರು. ಬಳಿಕ ಯಾವುದೇ ಚುನಾವಣೆಯಲ್ಲೂ ಮತಚಲಾವಣೆ ಮಾಡದ ಕಾರಣ, ಇತ್ತೀಚೆಗೆ ಮತದಾರ ಪಟ್ಟಿ ಪರಿಶೀಲನೆಯ ಸಂದರ್ಭ ಹೆಸರು ಕೈಬಿಡಲಾಗಿದೆ.