ಆರತಿಗೂ ಮುನ್ನ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಕಡ್ಡಾಯ!
ಆರತಿಗೂ ಮುನ್ನ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಕಡ್ಡಾಯ| ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಸಚಿವ ಯೋಗೇಶ್ ಭಟ್ಟಾರೈ ದೇಗುಲದಲ್ಲಿ ಆರತಿ ನಿರ್ವಹಿಸುವ ಬಗ್‌ಮತಿ ಆರತಿ ಪರಿವಾರಕ್ಕೆ ಸೂಚನೆ
ಕಾಠ್ಮಂಡು[ಸೆ.12]: ಆರತಿಗೂ ಪ್ರಸಿದ್ಧ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂದು ನೇಪಾಳ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಬಗ್ಗೆ ನೇಪಾಳ ಸರ್ಕಾರದ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಸಚಿವ ಯೋಗೇಶ್ ಭಟ್ಟಾರೈ ದೇಗುಲದಲ್ಲಿ ಆರತಿ ನಿರ್ವಹಿಸುವ ಬಗ್‌ಮತಿ ಆರತಿ ಪರಿವಾರಕ್ಕೆ ಆ. 26ರಂದು ಸೂಚನೆ ನೀಡಿದ್ದಾರೆ.
ದಿನನಿತ್ಯ ಪಶುಪತಿನಾಥ ದೇಗುಲದ ಸಮೀಪ ವಿರುವ ಬಾಗ್‌ಮತಿ ನದಿಯಲ್ಲಿ ಬಗ್‌ಮತಿ ಆರತಿ ಪರಿವಾರ ಗಂಗಾರತಿ ನಡೆಸುತ್ತಾ ಬರುತ್ತಿದ್ದು, ಪ್ರತೀ ಆರತಿಗೂ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತಿ ಹಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಅಲ್ಲದೇ ದೇಗುಲದ ವ್ಯವಹಾರವನ್ನು ನೋಡಿಕೊಳ್ಳುವ ಪಶುಪತಿ ಪ್ರದೇಶ ಅಭಿವೃದ್ಧಿ ಟ್ರಸ್ಟ್ ಗೂ ಈ ಬಗ್ಗೆ ತಿಳಿಸಲಾಗಿತ್ತು.
ಆದರೆ ಸರ್ಕಾರದ ಆದೇಶದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ದೇಗುಲದ ಪಕ್ಕದ ನದಿ ತೀರದಲ್ಲಿ ಶವಸಂಸ್ಕಾರ ನಡೆವ ವೇಳೆ ರಾಷ್ಟ್ರಗೀತೆ ಹೇಳುವುದು ಸರಿಯಲ್ಲ ಎಂ ಬ ವಾದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸೆ.4ರಿಂದ ಆರತಿ ವೇಳೆ ರಾಷ್ಟ್ರಗೀತೆ ಹಾಡುವುದನ್ನು ನಿಲ್ಲಿಸಲಾಗಿದೆ. ಈ ವಿಷಯ ಇದೀಗ ಸರ್ಕಾರದ ಕಿವಿಗೂ ಬಿದ್ದಿದ್ದು, ಈ ಕುರಿತು ಅದು ತನಿಖೆ ನಡೆಸಲು ಮುಂದಾಗಿದೆ. ಅಲ್ಲದೆ ಈ ಕುರಿತು ಗಂಗಾರತಿ ಎತ್ತುತ್ತಿರುವ ಬಾಗ್‌ಮತಿ ಆರತಿ ಪರಿವಾರಕ್ಕೆ ನೋಟಿಸ್ ಕೂಡಾ ಜಾರಿ ಮಾಡಿದೆ.