ದೆಹಲಿಯ ಬವಾನ ವಿದಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವ ಮ್ ಆದ್ಮಿ ಪಕ್ಷವು ಜಯಭೇರಿ ಬಾರಿಸಿದೆ. ಆಪ್ ಪಕ್ಷದ ರಾಮ್ ಚಂದರ್ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 24 ಸಾವಿರ ವೋಟುಗಳ ಅಂತರದಿಂದ ಮಣಿಸಿದ್ದಾರೆ.
ನವದೆಹಲಿ: ದೆಹಲಿಯ ಬವಾನ ವಿದಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವ ಮ್ ಆದ್ಮಿ ಪಕ್ಷವು ಜಯಭೇರಿ ಬಾರಿಸಿದೆ.
ಆಪ್ ಪಕ್ಷದ ರಾಮ್ ಚಂದರ್ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 24 ಸಾವಿರ ವೋಟುಗಳ ಅಂತರದಿಂದ ಮಣಿಸಿದ್ದಾರೆ.
ರಾಮ್ ಚಂದರ್ 59886 ವೋಟುಗಳನ್ನು ಪಡೆದಿದ್ದರೆ, ವೇದ ಪ್ರಕಾಶ್ 35834 ವೋಟುಗಳನ್ನು ಪಡೆದಿದ್ದಾರೆ.
ವೇದ್ ಪ್ರಕಾಶ್ ಕಳೆದ ವಿದಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆದರೆ ಕಳೆದ ಸ್ಥಳೀಯಾಡಳಿತ ಚುನಾವಣೆ ಸಂದರ್ಭದಲ್ಲಿ ಆಪ್ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಆಮ್ ಆದ್ಮಿ ಪಕ್ಷದ ಸ್ವಚ್ಛ ರಾಜಕಾರಣ ಹಾಗೂ ಎರಡುವರೆ ವರ್ಷದ ಕೆಲಸಕ್ಕೆ ನೀಡಿರುವ ಜನಾದೇಶ ಇದಾಗಿದೆ ಎಂದು ಟ್ವೀಟಿಸಿರುವ ಕೇಜ್ರಿವಾಲ್ ಮತದಾರರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ.
