100 ಕೋಟಿ ಮೊಬೈಲ್‌ ಗ್ರಾಹಕರ ಮಾಹಿತಿ ಪರಿಶೀಲಿಸಿ1 ವರ್ಷದೊಳಗೆ ಹೊಸ ವ್ಯವಸ್ಥೆ ಜಾರಿಗೆ ಸುಪ್ರೀಂ ಆದೇಶ

ನವದೆಹಲಿ (ಫೆ.07): ಮೊಬೈಲ್‌ ಸಿಮ್‌ ಕಾರ್ಡ್‌ಗಳ ದುರ್ಬಳಕೆ ತಡೆಗೆ 1 ವರ್ಷದೊಳಗೆ ಹೊಸ ವ್ಯವಸ್ಥೆ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಹೊಸ ಸಿಮ್‌ಗೆ ಆಧಾರ್‌ ಆಧರಿತ ಇ-ಕೆವೈಸಿ ವ್ಯವಸ್ಥೆ ತರುವುದಾಗಿ ಹೇಳಿರುವ ಕೇಂದ್ರ ಸರ್ಕಾರ, 100 ಕೋಟಿ ಮೊಬೈಲ್‌ ಚಂದಾದಾರರ ಮಾಹಿತಿ ಪರಿಶೀಲನೆಗೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಮೊಬೈಲ್‌ ಸಿಮ್‌ ಕಾರ್ಡ್‌ಗಳು ಭಯೋತ್ಪಾದಕ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆ ಗಳಿಗೆ ಬಳಕೆ ಆಗುವುದನ್ನು ತಡೆಯಲು ಮುಂದಾಗಿರುವ ಸರ್ವೋಚ್ಚ ನ್ಯಾಯಾಲಯ, ದೇಶದಲ್ಲಿ ಈಗಾಗಲೇ ಇರುವ 100 ಕೋಟಿ ಮೊಬೈಲ್‌ ಚಂದಾದಾರರು ಮತ್ತು ಹೊಸದಾಗಿ ಮೊಬೈಲ್‌ ಸಿಮ್‌ ಕೊಳ್ಳುವವರ ದಾಖಲಾತಿಗ ಳನ್ನು ಪರಿಶೀಲಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಾಲಯದ ಈ ಆದೇಶವನ್ನು ಒಪ್ಪಿ ಕೊಂಡಿರುವ ಕೇಂದ್ರ ಸರ್ಕಾರ, ಹಳೆಯ ಚಂದಾಚಾರರ ಮಾಹಿತಿ ಪರಿಶೀಲನೆಗೆ ಹೊಸ ವ್ಯವಸ್ಥೆ ರಚನೆ ಜೊತೆಗೆ, ಹೊಸ ಸಿಮ್‌ ಖರೀದಿ ವೇಳೆ ಆಧಾರ್‌ ಆಧರಿತ ಇ-ಕೆವೈಸಿ ಫಾಮ್‌ರ್‍ ತುಂಬುವುದನ್ನು ಕಡ್ಡಾಯ ಮಾಡುವುದಾಗಿ ಭರವಸೆ ನೀಡಿದೆ.

ಲೋಕನೀತಿ ಎಂಬ ಸ್ವಯಂಸೇವಾ ಸಂಸ್ಥೆ, ಮೊಬೈಲ್‌ ಸಿಮ್‌ ಕಾರ್ಡ್‌ಗಳ ದುರ್ಬಳಕೆ ಹಿನ್ನೆಲೆಯಲ್ಲಿ ಅವುಗಳ ಪರಿಶೀಲನೆ ನಡೆಸಬೇಕು ಎಂಬ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್‌. ಖೇಹರ್‌ ಮತ್ತು ನ್ಯಾ| ಎನ್‌.ವಿ. ರಮಣ ಅವರ ಪೀಠ, ಸಿಮ್‌ ಕಾರ್ಡ್‌ಗಳನ್ನು ಕಾನೂನುಬಾಹಿರ ಚಟುವಟಿ­ಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ಜೊತೆಗೆ ಎಲ್ಲ ಮೊಬೈಲ್‌ ಬಳಕೆದಾರರ ಪರಿಶೀ ಲನೆಯನ್ನು ಒಂದು ವರ್ಷದೊಳಗೆ ನಡೆಸ​ಬೇಕು. ಇದಕ್ಕಾಗಿ ಸೂಕ್ತ ವ್ಯವಸ್ಥೆಯೊಂದನ್ನು ರಚಿಸಬೇಕು ಎಂದು ಸೂಚಿಸಿತು.

ಜೊತೆಗೆ, ದೇಶದಲ್ಲಿ 100 ಕೋಟಿ ಮೊಬೈಲ್‌ ಚಂದಾದಾರರು ಇದ್ದು, ಇದರಲ್ಲಿ ಪ್ರೀಪೇಡ್‌ ಬಳಕೆದಾರರೇ ಶೇ.90ರಷ್ಟಿದ್ದಾರೆ. ಹೀಗಾಗಿ ಯಾವಾಗ ಪ್ರೀಪೇಡ್‌ ಚಂದಾದಾರರು ರೀಚಾಜ್‌ರ್‍ ಮಾಡುತ್ತಾರೋ ಆಗ ಅವರಿಗೆ ಅರ್ಜಿಯೊಂದನ್ನು ೕಏತುಂಬಿ ನೋಂದಾಯಿಸಿಕೊಳ್ಳುವ ಅವಕಾಶ ಕಲ್ಪಿಸುವಂಥ ಕಾರ್ಯತಂತ್ರ ರೂಪಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ‘ಈಗಾಗಲೇ ಹೊಸ ಮೊಬೈಲ್‌ ಚಂದಾದಾರರ ಆಧಾರ್‌ ಸಂಖ್ಯೆಯನ್ನು ಪಡೆದುಕೊಂಡೇ ಸಿಮ್‌ಕಾರ್ಡ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ ಈಗಾಗಲೇ ಇರುವ ಕೋಟ್ಯಂತರ ಮೊಬೈಲ್‌ ಬಳಕೆದಾರರ ನೋಂದಣಿ ಸ್ವಲ್ಪ ಕಷ್ಟವಾಗಲಿದೆ.ಆದರೆ ರೀಚಾಜ್‌ರ್‍ ಸಂದರ್ಭದಲ್ಲಿ ಚಂದಾದಾರರು ಆಧಾರ್‌ ಅಥವಾ ಇನ್ನಿತರ ಮಾನ್ಯತೆ ಪಡೆದ ಸೂಕ್ತ ದಾಖಲೆ ಪತ್ರಗಳನ್ನು ನೀಡಿ ರೀಚಾಜ್‌ರ್‍ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು. ಎಂದರು.