ನವದೆಹಲಿ: ಪೆಟ್ರೋಲ್, ಡೀಸೆಲ್ ದರಗಳು ಗಗನಮುಖಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಹಾಕಿಸಲು ಆಧಾರ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.ಹೀಗಾಗಿ ವಾಹನ ಸವಾರರು ಪೆಟ್ರೊಲ್, ಡೀಸೆಲ್ ಹಾಕಿಸುವ ಮುನ್ನ ಆಧಾರ್ ಕಾರ್ಡ್ ತೋರಿಸಿ, ಬಯೋಮೆಟ್ರಿಕ್‌ಗೆ ಕೈಬೆರಳಿನ ಗುರುತು ನೀಡಬೇಕು. ಇದರಿಂದ ಯಾರು ಎಷ್ಟು ಪೆಟ್ರೋಲ್ ಹಾಕಿಸಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದೆ. 

ಒಂದು ವೇಳೆ ಯಾರಾದರೂ ಒಮ್ಮೆಲೇ 10 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಹಾಕಿಸಿಕೊಂಡು ಕ್ಯಾಶ್ ನೀಡಿದರೆ ಅಂಥವರ ಮೇಲೆ ತೆರಿಗೆ ಇಲಾಖೆ ಹದ್ದಿನ ಕಣ್ಣಿಡಲಿದೆ. ಅವರೇನಾದರೂ ವಾರದಲ್ಲಿ 2-3 ಬಾರಿ ಪೆಟ್ರೋಲ್ ಹಾಕಿಸಿಕೊಂಡರೆ ಐಟಿ ದಾಳಿ ನಡೆಯಲಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

ಮತ್ತಷ್ಟು ಸುಳ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ