ನೀವು ಯಾವುದೇ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಬೇಕಾದರೆ ಇನ್ನು ಮುಂದೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
ಬೆಂಗಳೂರು (ಸೆ.02): ನೀವು ಯಾವುದೇ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಬೇಕಾದರೆ ಇನ್ನು ಮುಂದೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
ಧಾರ್ಮಿಕ ಪ್ರವಾಸಗಳಿಗೆ ಸಿಗುವ ಸಬ್ಸಿಡಿಯನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಹೊಂದಿರಲೇ ಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ. ಬದ್ರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಟಿಕೆಟ್ ಬುಕ್ ಮಾಡುವವರು ಆಧಾರ್ ಕಾರ್ಡನ್ನು ಹೊಂದಿದ್ದರೆ ಮಾತ್ರ ಸಬ್ಸಿಡಿ ಸಿಗಲಿದೆ. ಧಾರ್ಮಿಕ ಯಾತ್ರೆಗಳಿಗೆ ರೂ.20 ಸಾವಿರ ಸಬ್ಸಿಡಿ ದೊರಕಲಿದೆ.
ಪ್ರತಿ ವರ್ಷ 1000-1500 ಯಾತ್ರಾರ್ಥಿಗಳು ಸಬ್ಸಿಡಿಯನ್ನು ಪಡೆಯುತ್ತಾರೆ. ಹಣದ ದುರುಪಯೋಗವನ್ನು ತಡೆಗಟ್ಟಲು ಸರ್ಕಾರ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ 2014 ರಲ್ಲಿ ಈ ಸಬ್ಸಿಡಿ ಸೌಲಭ್ಯವನ್ನು ಜಾರಿಗೆ ತಂದಿದೆ.
