ಡ್ರೈವಿಂಗ್‌ ಲೈಸೆನ್ಸ್‌ (ಚಾಲನಾ ಪರವಾನಗಿ) ಅನ್ನು ಆಧಾರ್‌ ಜೊತೆ ಸಂಯೋಜಿಸುವ ವಿಷಯವಾಗಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ. ಆದರೆ, ವಿಳಾಸ ಮತ್ತು ವಯಸ್ಸಿನ ಖಾತರಿಗಾಗಿ ಆಧಾರ್‌ ಕಾರ್ಡನ್ನು ಒಂದು ಆಯ್ಕೆಯಾಗಿ ಅಷ್ಟೇ ಪರಿಗಣಿಸಲಾಗುವುದು ಎಂದು ತಿಳಿಸಿದೆ.

ನವದೆಹಲಿ: ಡ್ರೈವಿಂಗ್‌ ಲೈಸೆನ್ಸ್‌ (ಚಾಲನಾ ಪರವಾನಗಿ) ಅನ್ನು ಆಧಾರ್‌ ಜೊತೆ ಸಂಯೋಜಿಸುವ ವಿಷಯವಾಗಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ. ಆದರೆ, ವಿಳಾಸ ಮತ್ತು ವಯಸ್ಸಿನ ಖಾತರಿಗಾಗಿ ಆಧಾರ್‌ ಕಾರ್ಡನ್ನು ಒಂದು ಆಯ್ಕೆಯಾಗಿ ಅಷ್ಟೇ ಪರಿಗಣಿಸಲಾಗುವುದು ಎಂದು ತಿಳಿಸಿದೆ.

ಡ್ರೈವಿಂಗ್‌ ಲೈಸೆನ್ಸ್‌ಗೆ ಸಲ್ಲಿಸುವ ದಾಖಲೆಗಳಲ್ಲಿ ಆಧಾರ್‌ ಕೂಡ ಒಂದು. ವಿಳಾಸ ಮತ್ತು ವಯಸ್ಸಿನ ಖಾತರಿಗೆ ಬಳಸುವ ದಾಖಲೆಗಳಲ್ಲಿ ಆಧಾರ್‌ ಕಾರ್ಡನ್ನು ಕೂಡ ಸೇರಿಸಲಾಗಿದೆ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಆಧಾರ್‌ ಕಾರ್ಡ್‌ ಇಲ್ಲದವರು ಪಾಸ್‌ಪೋರ್ಟ್‌, ಜನನ ಪ್ರಮಾಣಪತ್ರ, ಜೀವ ವಿಮಾ ಪಾಲಿಸಿ ಮುಂತಾದವುಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಸಾದ್‌ ಹೇಳಿದ್ದಾರೆ.