ಇನ್ನುಮುಂದೆ ಚಿಕ್ಕಮಕ್ಕಳಿಗೆ ಬಾಲ ಆಧಾರ್

First Published 24, Feb 2018, 9:47 AM IST
Aadhaar For Children Below The Age of 5 Details Here
Highlights

ಸರ್ಕಾರದ ಎಲ್ಲಾ ಸೇವೆಗಳಿಗೆ ಆಧಾರ್ ನಂಬರ್ ಬಹುತೇಕ ಕಡ್ಡಾಯಗೊಳಿಸಲಾಗುತ್ತಿದೆ. ಆಧಾರ್ ಕಾರ್ಡ್‌ನ ಮಹತ್ವ ಹೆಚ್ಚುತ್ತಿರುವುದನ್ನು ಪರಿಗಣಿಸಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 5 ವರ್ಷದ ಒಳಗಿನ ಮಕ್ಕಳಿಗೆ ನೀಲಿ ಬಣ್ಣದ ‘ಬಾಲ ಆಧಾರ್‌ಕಾರ್ಡ್’ ಅನ್ನು ಪರಿಚಯಿಸಿದೆ.

ನವದೆಹಲಿ: ಸರ್ಕಾರದ ಎಲ್ಲಾ ಸೇವೆಗಳಿಗೆ ಆಧಾರ್ ನಂಬರ್ ಬಹುತೇಕ ಕಡ್ಡಾಯಗೊಳಿಸಲಾಗುತ್ತಿದೆ. ಆಧಾರ್ ಕಾರ್ಡ್‌ನ ಮಹತ್ವ ಹೆಚ್ಚುತ್ತಿರುವುದನ್ನು ಪರಿಗಣಿಸಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 5 ವರ್ಷದ ಒಳಗಿನ ಮಕ್ಕಳಿಗೆ ನೀಲಿ ಬಣ್ಣದ ‘ಬಾಲ ಆಧಾರ್‌ಕಾರ್ಡ್’ ಅನ್ನು ಪರಿಚಯಿಸಿದೆ.

ಹೀಗಾಗಿ 5 ವರ್ಷದ ಒಳಗಿನ ಮಕ್ಕಳು ಆಧಾರ್ ಕಾರ್ಡ್ ಪಡೆಯಲು ಬಯೋಮೆಟ್ರಿಕ್ ಅನ್ನು ನೀಡಬೇಕಾಗಿಲ್ಲ.  ಮಕ್ಕಳು 5 ವರ್ಷ ಆದ ಬಳಿಕ ಬಯೋಮೆಟ್ರಿಕ್ ಅನ್ನು ನೀಡಬೇಕಾಗಿದೆ. ಒಂದು ವೇಳೆ 7 ವರ್ಷದ ಒಳಗಾಗಿ ಬಯೋಮೆಟ್ರಿಕ್ ನೀಡದೇ ಹೋದಲ್ಲಿ ಬಾಲ ಆಧಾರ್ ಕಾರ್ಡ್ ಅನ್ನು ಅಮಾನತಿನಲ್ಲಿ ಇರಿಸಲಾಗುತ್ತದೆ.

5 ವರ್ಷದ ಒಳಗಿನ ಮಗುವಿಗೆ ಬಾಲ ಆಧಾರ್ ಕಾರ್ಡ್ ಮಾಡಿಸಲು ಸಮೀಪದ ನೋಂದಣಿ ಕೇಂದ್ರಕ್ಕೆ ತೆರಳಿ ಅರ್ಜಿಯನ್ನು ಭರ್ತಿ ಮಾಡಬೇಕು. ಜೊತೆಗೆ ಮಗುವಿನ ಫೋಟೋ ನೀಡಬೇಕು. ಬಾಲ ಆಧಾರ್ ಪೋಷಕರ ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸಲ್ಪಟ್ಟಿರುತ್ತದೆ.

loader