ಆಧಾರ್ ಬಳಕೆದಾರರ ಮಾಹಿತಿ, ಬ್ಯಾಂಕ್ ವಿವರ ಸೋರಿಕೆ?

news | 3/24/2018 | 10:46:00 AM
isthiyakh
Suvarna Web Desk
Highlights
  • ವರದಿಯ ಪ್ರಕಾರ ಸರ್ಕಾರಿ‌ ಸಂಸ್ಥೆಯಿಂದಲೇ ಸೋರಿಕೆ
  • ಸರ್ಕಾರಕ್ಕೆ ತಿಳಿಸಿದರೂ ಪ್ರಯೋಜನವಾಗಿಲ್ಲ

ಆಧಾರ್ ಹಾಗೂ ಅದರ ಹೇರುವಿಕೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ,   ಆಧಾರ್ ಬಳಕೆದಾರರ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಿರುವ ಇನ್ನೊಂದು ಘಟನೆ ವರದಿಯಾಗಿದೆ.
ಎನ್'ಡಿಟಿವಿ ಪ್ರಕಟಿಸಿರುವ ವರದಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಈ ಸೋರಿಕೆ ನಡೆದಿದೆ. ಇದನ್ನು ಒಂದು ತಿಂಗಳ ಹಿಂದಯೇ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಈವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ.
ಸಂಸ್ಥೆಯ ಎಡವಟ್ಟಿನಿಂದಾಗಿ ಕೇವಲ ಅದರ ಸೇವೆಯನ್ನು ಪಡೆದ ಬಳಕೆದಾರರದ್ದು ಮಾತ್ರವಲ್ಲ, ಇತರ ಆಧಾರ್ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ಸಂಸ್ಥೆಯು ಏಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್)ಯನ್ನು ಸುರಕ್ಷಿತಗೊಳಿಸಿರದ ಕಾರಣ ಎಲ್ಲಾ ಆಧಾರ್ ಬಳಕೆದಾರರ ಮಾಹಿತಿಯು ಅಸುರಕ್ಷಿತವಾಗಿದೆ.
ಬಳಕೆದಾರರ ವೈಯುಕ್ತಿಕ ಮಾಹಿತಿಯ ಜೊತೆ, ಅವರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಸೋರಿಕೆಯಾದ ಮಾಹಿತಿಯು ಒಳಗೊಂಡಿದೆಯೆನ್ನಲಾಗಿದೆ.
ZDNet ವರದಿಯ ಪ್ರಕಾರ,  ದೆಹಲಿಯ ಮಾಹಿತಿ ಸುರಕ್ಷತಾ ತಜ್ಞ ಕರಣ್ ಸೈನಿ ಈ ಸೋರಿಕೆಯನ್ನು ಕಂಡುಹಿಡಿದಿದ್ದಾರೆ. ಆದರೆ ಅದು ಯಾವ ಸರ್ಕಾರೊ ಸಂಸ್ಥೆಯೆಂಬುವುದನ್ನು ಅವರು ಬಹಿರಂಗಪಡಿಸಿಲ್ಲ.

Comments 0
Add Comment