ಆಧಾರ್ ಲಿಂಕ್ ಮಾಡಲು ಗಡುವು ವಿಸ್ತರಣೆ ಸಾಧ್ಯತೆ

First Published 7, Mar 2018, 11:32 AM IST
Aadhaar card Deadline May  extended
Highlights

ವಿವಿಧ ಸೇವೆಗಳು ಮತ್ತು ಸರ್ಕಾರದಿಂದ ನಡೆಯುವ ಕಲ್ಯಾಣ ಕಾರ್ಯ ಕ್ರಮಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿರುವ ಮಾ. 31ರ ಕೊನೆಯ ದಿನಾಂಕದ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ನವದೆಹಲಿ: ವಿವಿಧ ಸೇವೆಗಳು ಮತ್ತು ಸರ್ಕಾರದಿಂದ ನಡೆಯುವ ಕಲ್ಯಾಣ ಕಾರ್ಯ ಕ್ರಮಗಳಿಗೆ ಆಧಾರ್ ಜೋಡಣೆಗೆ ನೀಡಲಾಗಿರುವ ಮಾ. 31ರ ಕೊನೆಯ ದಿನಾಂಕದ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ರ ಅಭಿಪ್ರಾಯಕ್ಕೆ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ಸಮ್ಮತಿ ಸೂಚಿಸಿತು.

ನಾವು ಈ ಹಿಂದೆಯೂ ಗಡುವು ವಿಸ್ತರಿಸಿದ್ದೆವು. ಈಗಲೂ ವಿಸ್ತರಣೆಗೆ ಸಿದ್ಧರಿದ್ದೇವೆ, ಆದರೆ ಮಾಸಾಂತ್ಯದಲ್ಲಿ ಅದನ್ನು ಘೋಷಿಸುತ್ತೇವೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

loader