ನವದೆಹಲಿ(ಆ.3): ವಿಶಿಷ್ಠ ಗುರುತು ಪ್ರಾಧಿಕಾರದ  ಟ್ರೋಲ್ ಫ್ರೀ ಸಹಾಯವಾಣಿ ನಂಬರ್ ಇದೀಗ ಜನರನ್ನು ಗೊಂದಲದಲ್ಲಿ ಸಿಲುಕಿಸಿದೆ. ಕಾರಣ ಬಳಕೆದಾರ ಗಮನಕ್ಕೆ ತರದೇ  ಟೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಫೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು  ಸ್ಮಾರ್ಟ್ ಪೋನ್  ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ, ತಾನು ಯಾವುದೇ ಟೆಲಿಕಾಂ ಸಂಸ್ಥೆಗೆ ಟೋಲ್ ಫ್ರೀ ಸಹಾಯವಾಣಿ ನಂಬರ್ ಸೇರಿಸುವಂತೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿಂದೆ ಇದ್ದ 1800-300 ಸಹಾಯವಾಣಿ ಸಂಖ್ಯೆ ಜೊತೆಗೆ  1947  ಹೊಸ  ನಂಬರ್  ಪೋನ್ ಬುಕ್ಸ್ ನಲ್ಲಿ ಕಾಣಿಸಿಕೊಂಡಿದೆ. ಆಧಾರ್ ಕಾರ್ಡ್ ಇರುವ, ಇಲ್ಲದಿರುವ ಅಥವಾ  ಆಧಾರ್ ಆ್ಯಪ್ ಜೋಡಣೆ ಮಾಡಿರುವ, ಮಾಡದಿರುವ ಎಲ್ಲಾ ಪೋನ್ ಗಳಲ್ಲಿ  ಸಹಾಯವಾಣಿ ನಂಬರ್ ಬರುತ್ತಿದೆ. 

ಬಳಕೆದಾರರ ಗಮನಕ್ಕೆ ತರದೇ   ಟೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಸಂಪರ್ಕಿತರ ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿ ಎಂದು ಫ್ರೆಂಚ್ ಭದ್ರತಾ ತಜ್ಞ ಎಲ್ಲಿಯಟ್  ಅಲ್ಡರ್ ಸನ್  ಟ್ವೀಟರ್ ಮೂಲಕ ಯುಐಡಿಎಐಯನ್ನು ಪ್ರಶ್ನಿಸಿದ್ದಾರೆ.

ಆದರೆ ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರ, ಟ್ರೋಲ್ ಫ್ರೀ ಸಹಾಯವಾಣಿ ನಂಬರ್ ನ್ನು ಸೇರಿಸುವಂತೆ ತಾನು ಈ ರೀತಿಯ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿಸಿದೆ.