ರಾಜಕಾರಣಿಗಳು ಎಂದರೆ ಜನಸಾಮಾನ್ಯರ ನೋವಿಗೆ, ಕಷ್ಟಕ್ಕೆ ದನಿಯಾಗಬೇಕಾದವರು. ಆದರೆ ಇತ್ತೀಚೆಗೆ ಅವೆಲ್ಲಾ ಬದಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗೆ ದನಿಯಾಗಬೇಕಾದವರು ಅವರ ಮೇಲೆಯೇ ತಿರುಗಿ ಬೀಳುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ, ಪಟಾಲಂಗಳ ಒಳಿತಿಗಾಗಿ ಕೆಲ ಜನನಾಯಕರು ರೌಡಿಸಂನಂತ ನೀಚ ಕೃತ್ಯಕ್ಕೂ ಕೈ ಹಾಕುತ್ತಿದ್ದಾರೆ. ಈಗ ಅಂತಹುದ್ದೇ ಗಂಭೀರ ಆರೋಪ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಟಿ.ಬಿ ನಾಗರಾಜ್ ಮೇಲೆ ಬಂದಿದೆ.
ಬೆಂಗಳೂರು(ಅ.30): ರಾಜಕಾರಣಿಗಳು ಎಂದರೆ ಜನಸಾಮಾನ್ಯರ ನೋವಿಗೆ, ಕಷ್ಟಕ್ಕೆ ದನಿಯಾಗಬೇಕಾದವರು. ಆದರೆ ಇತ್ತೀಚೆಗೆ ಅವೆಲ್ಲಾ ಬದಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗೆ ದನಿಯಾಗಬೇಕಾದವರು ಅವರ ಮೇಲೆಯೇ ತಿರುಗಿ ಬೀಳುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ, ಪಟಾಲಂಗಳ ಒಳಿತಿಗಾಗಿ ಕೆಲ ಜನನಾಯಕರು ರೌಡಿಸಂನಂತ ನೀಚ ಕೃತ್ಯಕ್ಕೂ ಕೈ ಹಾಕುತ್ತಿದ್ದಾರೆ. ಈಗ ಅಂತಹುದ್ದೇ ಗಂಭೀರ ಆರೋಪ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಟಿ.ಬಿ ನಾಗರಾಜ್ ಮೇಲೆ ಬಂದಿದೆ.
ಹೊಸಕೋಟೆ ಶಾಸಕನ ವಿರುದ್ಧ ಗೂಂಡಾಗಿರಿಯ ಆರೋಪ
ಇಂಥದ್ದೊಂದು ಆರೋಪ ಮಾಡಿದ್ದು ಹೊಸಕೋಟೆ ತಾಲೂಕು ಮಾಕನಹಳ್ಳಿ ಗ್ರಾಮದ ನ್ಯೂ ಲೈಫ್ ಬೇತಲ್ ಚರ್ಚ್'ನ ಪಾಸ್ಟರ್ ಎಂ.ಪಿ ಸ್ಯಾಮುವೇಲ್. ಮಾಕನಹಳ್ಳಿಯಲ್ಲಿ ವಾಸವಾಗಿರುವ ಸ್ಯಾಮುವೇಲ್'ಗೆ 70 ವರ್ಷದ ತಾಯಿ ಇದ್ದಾರೆ. ಆದರೀಗ ಇವರಿಗೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಎಂಡ್ ಬೆಂಬಲಿಗರಿಂದ ಮೇಲಿಂದ ಮೇಲೆ ಪ್ರಾಣ ಬೆದರಿಕೆ ಬರುತ್ತಿದೆಯಂತೆ. ಪೊಲೀಸ್ ಠಾಣೆಯಿಂದ ಹಿಡಿದು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೂ ದೂರು ಸಲ್ಲಿಸಿದ್ದಾರೆ .
ಚುನಾವಣೆಗಳಲೆಲ್ಲ ಬಿಜೆಪಿಗೆ ಓಟ್ ಹಾಕಿದ್ದೀಯ. ಚರ್ಚ್ಗೆ ಬರುವವರಿಗೆಲ್ಲಾ ಬಿಜೆಪಿಗೆ ವೋಟ್ ಹಾಕುವಂತೆ ಮಾಡಿದ್ದೀಯ ಎಂದು ನಾಗರಾಜ್ ಬೆಂಬಲಿಗರು ಸ್ಯಾಮುವೇಲ್ ಮತ್ತು ಅವರ ತಾಯಿ ಮೇಲೆ ಹಲ್ಲೆ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ ಚರ್ಚ್ ಬೆಲೆ ಬಾಳುವ ಭೂಮಿಯಲ್ಲಿದೆ. ಅದಕ್ಕೆ ತಮ್ಮನ್ನು ಧಮ್ಕಿ ಹಾಕಿ ಓಡಿದುವ ಪ್ಲಾನ್ ಮಾಡಿದ್ದಾರೆ ಎನ್ನುವ ಸ್ಯಾಮುವೇಲ್, ಪೊಲೀಸರ ಬಳಿ ಹೋದರೂ ನ್ಯಾಯ ಸಿಗುತ್ತಿಲ್ಲ ಎನ್ನುತ್ತಾರೆ
ತಿರುಮಲಶೆಟ್ಟಿ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಚನ್ನೇಶ್'ರವರೇ ಶಾಸಕರ ಪರವಾಗೇ ಮಾತನಾಡುತ್ತಾರಂತೆ. ಅಷ್ಟೇ ಅಲ್ಲದೆ ನನ್ನ ಮತ್ತು ನನ್ನ ತಾಯಿಯನ್ನು ಅಕ್ರಮವಾಗಿ ಠಾಣೆಯಲ್ಲೇ ಕೂಡಿ ಹಾಕಿದ್ದರು ಎನ್ನುವ ಆರೋಪ ಸ್ಯಾಮುವೇಲ್ ಅವರದ್ದು. ಗೃಹ ಮಂತ್ರಿಗಳಿಗೂ ತಮ್ಮ ಕಷ್ಟ ಹೇಳ್ಕೊಂಡಿದ್ದಾರೆ. ಸಚಿವರು ಈ ಕುಟುಂಬಕ್ಕೆ ಅಭಯ ನೀಡುತ್ತಾರಾ? ಕಾದು ನೋಡಬೇಕಿದೆ.
