ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದಾರೆ. 'ಪೀಲೆ: ಬರ್ತ್ ಆಫ್ ಎ ಲೆಜೆಂಡ್' ಚಿತ್ರದ ಕೆಲಸಕ್ಕಾಗಿ ಆಸ್ಕರ್ ಗೆ ಎರಡನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.
ಮುಂಬೈ (ಡಿ.14): ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದಾರೆ. 'ಪೀಲೆ: ಬರ್ತ್ ಆಫ್ ಎ ಲೆಜೆಂಡ್' ಚಿತ್ರದ ಕೆಲಸಕ್ಕಾಗಿ ಆಸ್ಕರ್ ಗೆ ಎರಡನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.
89 ನೇ ಅಕಾಡೆಮಿ ಅವಾರ್ಡ್ ನ ಒರಿಜನಲ್ ಸ್ಕೋರ್ ಕೆಟಗರಿಯ ಒಟ್ಟು 145 ಸ್ಕೋರ್ ನಲ್ಲಿ ರೆಹಮಾನ್ ಹೆಸರು ನಾಮಂಕಿತವಾಗಿದೆ.
2009 ರಲ್ಲಿ ತೆರೆಕಂಡ ಸ್ಲಮ್ ಡಾಗ್ ಮಿಲೇನಿಯರ್ ಚಿತ್ರದ ಸಂಗೀತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಒಲಿದಿತ್ತು. ಜ.24 ರಂದು 89 ನೇ ಅಕಾಡೆಮಿ ಅವಾರ್ಡ್'ನ ಅಂತಿಮ ನಾಮನಿರ್ದೇಶನ ಘೋಷಣೆಯಾಗಲಿದೆ.
ಫೆ.26 ರಂದು ಲಾಸ್ ಏಂಜಲೀಸ್ ನಲ್ಲಿರುವ ಡೋಲ್ಬೆ ಥಿಯೇಟರ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ.
