Asianet Suvarna News Asianet Suvarna News

ಪಕ್ಕದ್ಮನೆಯವ ಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಿದ, ನನಗೂ ಹೆಲಿಕಾಪ್ಟರ್'ನಿಂದ ಹೂಮಳೆಗೆ ಅಸ್ತು ಎನ್ನಿ!

ಬೆಂಗಳೂರಿನ ಜನತೆಗೆ ಹೊಸ ಕ್ರೇಜ್ ಹುಟ್ಟುಕೊಂಡಿದೆ. ಅದೇ ಹೆಲಿಕಾಪ್ಟರ್ ಪುಷ್ಪಾರ್ಚನೆ ಹುಚ್ಚು. ಇದು ಯಾವ ಮಟ್ಟಿಗೆ ಬಂದಿದೆ ಅಂತಂದರೆ. ಗೃಹಪ್ರವೇಶಕ್ಕೂ ಆಕಾಶದಿಂದಲೇ ಹೂಮಳೆ ಸುರಿಸಬೇಕು ಎನ್ನುವ ಮಟ್ಟಿಗೆ. ಇಂತಹ ಪ್ರಕರಣ ಕೋರ್ಟ್​​ ಮೆಟ್ಟಿಲೇರಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ

A Odd Case Is in Court

ಬೆಂಗಳೂರು(ಜ.04): ಬೆಂಗಳೂರಿನ ಜನತೆಗೆ ಹೊಸ ಕ್ರೇಜ್ ಹುಟ್ಟುಕೊಂಡಿದೆ. ಅದೇ ಹೆಲಿಕಾಪ್ಟರ್ ಪುಷ್ಪಾರ್ಚನೆ ಹುಚ್ಚು. ಇದು ಯಾವ ಮಟ್ಟಿಗೆ ಬಂದಿದೆ ಅಂತಂದರೆ. ಗೃಹಪ್ರವೇಶಕ್ಕೂ ಆಕಾಶದಿಂದಲೇ ಹೂಮಳೆ ಸುರಿಸಬೇಕು ಎನ್ನುವ ಮಟ್ಟಿಗೆ. ಇಂತಹ ಪ್ರಕರಣ ಕೋರ್ಟ್​​ ಮೆಟ್ಟಿಲೇರಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಮುನಿರಾಜು ಎನ್ನುವವರು ಬೆಂಗಳೂರು ಪೂರ್ವ ತಾಲೂಕಿನ ವರ್ತೂರಿಗೆ ಸಮೀಪದ ಮುಳ್ಳೂರು ಗ್ರಾಮದಲ್ಲಿ ಭವ್ಯ ಬಂಗಲೆಯೊಂದನ್ನು ಕಟ್ಟಿಸಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇದೇ ತಿಂಗಳ 9ರಂದು ಗೃಹಪ್ರವೇಶವನ್ನ ನಿಗದಿ ಮಾಡಿ ಆಹ್ವಾನ ಪತ್ರಿಕೆಗಳನ್ನೂ ಮುದ್ರಿಸಲಾಗಿತ್ತು. ಇದರಲ್ಲಿ ಹೆಲಿಕಾಫ್ಟರ್'​​ನಿಂದ ಮನೆ ಮೇಲೆ ಅಮೃತ ಘಳಿಗೆಯಲ್ಲಿ ಪುಷ್ಪಾರ್ಚನೆ ನಡೆಯುತ್ತದೆ ಎಂದೂ ಮುದ್ರಿಸಿ ವಿತರಿಸಲಾಗಿತ್ತು. ಆದರೆ, ಈ ವಿಚಾರ ವರ್ತೂರು ಠಾಣೆಯಲ್ಲಿ ಕಾಪ್ಟರ್ ಬಳಕೆಗೆ ಅನುಮತಿ ನಿರಾಕರಿಸಲಾಗಿದೆ. ಇದು ಮನೆ ಮಾಲೀಕನನ್ನು ಕೆರಳಿಸಿದ್ದು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ..

ಈ ಹಿಂದೆ ಮುನಿರಾಜು ಪಕ್ಕದ ಮನೆಯ ಗೃಹಪ್ರವೇಶಕ್ಕೂ ಹೆಲಿಕಾಪ್ಟರ್​'ನಿಂದ ಹೂಮಳೆ ಸುರಿಸಿದ್ದರು. 6 ತಿಂಗಳ ಹಿಂದೆ ಅಭಿಷೇಕ್ ಗೌಡ ಕೂಡ ಕಾಪ್ಟರ್'​ನಿಂದ ಪುಷ್ಪಾರ್ಚನೆ ಮಾಡಿಸಿದ್ದರು.ಹೀಗಾಗಿ ನಮಗೂ ಅವಕಾಶ ಕೊಡಿ ಅನ್ನೋದು ಮಾಲೀಕ ಮುನಿರಾಜು ಹಠ.

ಪಕ್ಕದ ಮನೆಯವರ ರೀತಿ ನನಗೂ ಆಕಾಶದಿಂದ ಹೂಮಳೆ ಸುರಿಸಲು ಅವಕಾಶ ಕೊಡಿ ಎನ್ನುವುದು ಮುನಿರಾಜು ಅವರ ಪ್ರತಿಷ್ಠೆಯ ವಿಚಾರ. ಅಲ್ಲದೇ, ವೈಯಕ್ತಿಕ. ಇಂತಹ ವಿಚಿತ್ರ ನಡೆಯಿಂದ ಕೋರ್ಟ್​ ನಿಲುವು ಏನೆಂಬುದು ಸೋಮವಾರದ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ..

 

Follow Us:
Download App:
  • android
  • ios