ದೇಶಾದ್ಯಂತ ಎಂದಿನಂತೆ ಇಂದು ಕೂಡ ಬ್ಯಾಂಕ್ ವ್ಯವಹಾರ ನಡೆಯಲಿದೆ. ಆದರೆ ಕೊಂಚ ಬದಲಾವಣೆಯಾಗಿದೆ. ಅದೇನೆಂದರೆ, ಬ್ಯಾಂಕಲ್ಲಿ ಖಾತೆ ಹೊಂದಿದವರಿಗೆ ಮಾತ್ರ ವ್ಯವಹಾರ ನಡೆಸಲು ಅವಕಾಶವಿದೆ. ಇಂದು ಮತ್ತು ನಾಳೆ ಗ್ರಾಹಕರು ತಾವು ಖಾತೆ ಹೊಂದಿದ್ದ ಬ್ಯಾಂಕ್'ಗಳಲ್ಲಿ ಮಾತ್ರ ನೋಟು ವಿನಿಮಯ ಅಥವಾ ಡೆಪಾಸಿಟ್ ಮಾಡಬಹುದು. ಭಾರತೀಯ ಬ್ಯಾಂಕ್ ಅಸೋಷಿಯೇಷನ್ 2 ದಿನಗಳ ಅವಧಿಗೆ ಈ ಹೊಸ ನಿರ್ಧಾರ ಕೈಗೊಂಡಿದೆ. ಬ್ಯಾಂಕ್ಗಳು ತಮ್ಮ ಸ್ವಂತ ಗ್ರಾಹಕರ ಬಗ್ಗೆ ನಾವು ಗಮನ ಕೊಡುವ ದೃಷ್ಟಿಯಿಂದ ಎರಡುದಿನಗಳ ಮಟ್ಟಿಗೆ ಈ ನಿರ್ಧಾರ ಕೈಗೊಂಡಿದ್ದಾಗಿ ಐಬಿಎ ಚೇರ್ಮನ್ ರಾಜೀವ್ ರಿಶಿ ಸ್ಪಷ್ಟಪಡಿಸಿದರು.
ನವದೆಹಲಿ(ನ.19): 500, 1000 ಮುಖಬೆಲೆಯ ನೋಟ್ ನಿಷೇಧ ಹಿನ್ನೆಲೆ, ಭಾರತೀಯ ಬ್ಯಾಂಕ್ ಅಸೋಷಿಯೇಷನ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಎರಡು ದಿನಗಳ ಅವಧಿಗೆ ಹೊಸ ನಿರ್ಧಾರವನ್ನು ಕೈ ಗೊಂಡಿದೆ. ಏನದು ನಿರ್ಧಾರ, ಇದ್ರಿಂದ ಗ್ರಾಹಕರಿಗೆ ಯಾವ ಅನುಕೂಲ ಆಗುತ್ತದೆ? ಇಲ್ಲಿದೆ ವಿವರ.
ದೇಶಾದ್ಯಂತ ಎಂದಿನಂತೆ ಇಂದು ಕೂಡ ಬ್ಯಾಂಕ್ ವ್ಯವಹಾರ ನಡೆಯಲಿದೆ. ಆದರೆ ಕೊಂಚ ಬದಲಾವಣೆಯಾಗಿದೆ. ಅದೇನೆಂದರೆ, ಬ್ಯಾಂಕಲ್ಲಿ ಖಾತೆ ಹೊಂದಿದವರಿಗೆ ಮಾತ್ರ ವ್ಯವಹಾರ ನಡೆಸಲು ಅವಕಾಶವಿದೆ. ಇಂದು ಮತ್ತು ನಾಳೆ ಗ್ರಾಹಕರು ತಾವು ಖಾತೆ ಹೊಂದಿದ್ದ ಬ್ಯಾಂಕ್'ಗಳಲ್ಲಿ ಮಾತ್ರ ನೋಟು ವಿನಿಮಯ ಅಥವಾ ಡೆಪಾಸಿಟ್ ಮಾಡಬಹುದು.
ಭಾರತೀಯ ಬ್ಯಾಂಕ್ ಅಸೋಷಿಯೇಷನ್ 2 ದಿನಗಳ ಅವಧಿಗೆ ಈ ಹೊಸ ನಿರ್ಧಾರ ಕೈಗೊಂಡಿದೆ. ಬ್ಯಾಂಕ್ಗಳು ತಮ್ಮ ಸ್ವಂತ ಗ್ರಾಹಕರ ಬಗ್ಗೆ ನಾವು ಗಮನ ಕೊಡುವ ದೃಷ್ಟಿಯಿಂದ ಎರಡುದಿನಗಳ ಮಟ್ಟಿಗೆ ಈ ನಿರ್ಧಾರ ಕೈಗೊಂಡಿದ್ದಾಗಿ ಐಬಿಎ ಚೇರ್ಮನ್ ರಾಜೀವ್ ರಿಶಿ ಸ್ಪಷ್ಟಪಡಿಸಿದರು.
ವೃದ್ಧರಿಗೆ ಈ ನಿಯಮದಿಂದ ವಿನಾಯತಿ
ಐಬಿಎ ಕೈಗೊಂಡಿರುವ ಈ ನಿಯಮದಿಂದ ವೃದ್ಧರಿಗೆ ವಿನಾಯತಿ ಇದೆ. ಸೀನಿಯರ್ ಸಿಟಿಜನ್ ಯಾವುದೇ ಬ್ಯಾಂಕ್ ನಲ್ಲಿ ಬೇಕಾದ್ರೂ ವ್ಯವಹಾರ ನಡೆಸಬಹುದು. ಆದ್ರೆ ಸೀನಿಯರ್ ಗುರಿತಿನ ಕಾರ್ಡ್ ಕಡ್ಡಾಯವಾಗಿ ತರಲೇ ಬೇಕು. ಇದೆಲ್ಲ ಕೇವಲ 2 ದಿನಗಳಿಗೆ ಮಾತ್ರ ಅನ್ವಯಿಸಲಿದೆ. ಸೋಮವಾರದಿಂದ ಈ ಹಿಂದಿನಂತೆ ಎಲ್ಲಾ ಬ್ಯಾಂಕ್ಗಳಲ್ಲೂ ಎಲ್ಲರಿಗೂ ಎಲ್ಲಾ ರೀತಿಯ ಸೇವೆಯೂ ಲಭ್ಯವಿರಲಿದೆ. ಇನ್ನೂ ಬುಧವಾರದಿಂದ ಗ್ರಾಹಕರ ಬಲಗೈ ತೋರು ಬೆರಳಿಗೆ, ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತೆ ಎನ್ನಲಾಗ್ತಿದೆ.
ರಜೆ ರದ್ದುಗೊಳಿಸಿದ ಸಿಎಂ ವಿರುದ್ಧ ಬ್ಯಾಂಕ್ ನೌಕರರ ಅಸಮಾಧಾನ
ವಾಯ್ಸ್: ಕಳೆದ 10 ದಿನಗಳಿಂದ ಬ್ಯಾಂಕ್ ಸಿಬ್ಬಂದಿಗೆ ರಜೆ ಇಲ್ಲ.. ಮೊನ್ನೆ ಕನಕಜಯಂತಿಯಂದು ಕೂಡ ರಾಜ್ಯ ಸರ್ಕಾರ ಬ್ಯಾಂಕ್ ನೌಕರರ ರಜೆ ರದ್ದುಪಡಿಸಿತ್ತು. ಇದೆಲ್ಲದರಿಂದ ಅಸಮಾಧಾನಗೊಂಡ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ರಜೆ ಕೋರಿ ಸಿಎಂ ಗೆ ಪತ್ರ ಬರೆದಿದೆ. ನಾವೂ ಕೂಡ ಮನುಷ್ಯರೇ, ನಮ್ಮ ಮೇಲೆ ಕರುಣೆ ತೋರಿ ಅಂತಾ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಏನೆಂದು ಪ್ರತಿಕ್ರಿಯಿಸ್ತಾರೆ ಕಾದು ನೋಡಬೇಕಿದೆ.
