ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದು ಹಾವನ್ನೇ ಕಚ್ಚಿ ಜಗಿದ ಭೂಪ!

First Published 22, Feb 2018, 10:08 AM IST
A Man Bites Snake
Highlights

ಹಾವು ಕಡಿದಿದೆ ಎಂದು ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ಹಾವಿನ ತಲೆಯನ್ನೇ ಕಚ್ಚಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಲಕ್ನೋ (ಫೆ.21): ಹಾವು ಕಡಿದಿದೆ ಎಂದು ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ಹಾವಿನ ತಲೆಯನ್ನೇ ಕಚ್ಚಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸೊನೆಲಾಲ್ ಎಂಬ ವ್ಯಕ್ತಿ ಪ್ರಜ್ಞೆತಪ್ಪಿ ಬಿದ್ದಿದ್ದಾಗ ಆ್ಯಂಬುಲೆನ್ಸ್ ಮೂಲಕ ನೆರೆಹೊರೆಯವರು ಹತ್ತಿರದ ಮೊಘಗಂಜ್ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾವು ಕಡಿದ ಗುರುತು ಕಂಡುಬರದಿರುವುದು ತಲೆನೋವಾಗಿತ್ತು. ರಾತ್ರಿ 10 ಗಂಟೆಗೆ ಸೊನೆಲಾಲ್ ಘಟನೆ ವಿವರ ಬಿಚ್ಚಿಟ್ಟಿದ್ದಾನೆ. ದನ ಮೇಯಿಸುವಾಗ ಹಾವು ಕಡಿದಿದ್ದು, ಅದರ ಸೇಡಿಗೆ ಹಾವಿನ ತಲೆಯನ್ನೇ ಕಚ್ಚಿ ಅಗಿದಿರುವುದಾಗಿ ಹೇಳಿದ್ದ. ಅನಂತರದಲ್ಲಿ ಹಾವು ಕಡಿದೇ ಇರಲಿಲ್ಲ, ಆದರೆ ಹಾವು ಕಡಿದಿದೆ ಎಂದು ಹಾವಿನ ತಲೆಯ ಭಾಗವನ್ನೇ ಕಚ್ಚಿದ್ದ ಎಂಬುದು ದೃಢವಾಗಿದೆ. 

[ಸಾಂದರ್ಭಿಕ ಚಿತ್ರ]

loader