ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ದಾವ​ಣ​ಗೆರೆ, ಅ.11: ಹೆಲ್ಮೆಟ್‌ ಧರಿಸದ ಕಾರಣ ಬೈಕ್‌ ತಡೆ ಹಿಡಿದರೆಂದು ಕುಪಿತಗೊಂಡ ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದೆ. ಕಾನ್ಸ್‌ಟೇಬಲ್‌ ನಾರಾ​ಯಣರಾಜ ಅರಸ್‌ ಹಾಗೂ ಎಎ​ಸ್‌ಐ ಅಂಜಿ​ನಪ್ಪ ಹಲ್ಲೆಗೊಳಗಾದವರು. ಪಟ್ಟಣದ ಸಿದ್ದ​ರಾ​ಮೇ​ಶ್ವರ ಬಡಾ​ವಣೆ ವಾಸಿ ಕೆ.ಎ​ಚ್‌.​ರು​ದ್ರ​ಪ್ಪ ಹಲ್ಲೆ ನಡೆಸಿದ ಆರೋಪಿ. 

ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಬೈಕ್‌ ಸವಾರರನ್ನು ತಡೆದು ಸಂಚಾರ ಪೊಲೀಸರು ನಗರದ ಹದಡಿ ರಸ್ತೆ​ಯಲ್ಲಿ ತಡೆದು ದಂಡ ವಿಧಿಸುತ್ತಿದ್ದರು. 

ಇದೇ ವೇಳೆ ಹೆಲ್ಮೆಟ್‌ ಧರಿಸದೇ ಬಂದ ರುದ್ರಪ್ಪನನ್ನು ಕಾನ್ಸ್‌ಟೇಬಲ್‌ ನಾರಾಯಣರಾಜ ತಡೆದಿದ್ದಾರೆ. ಈ ವೇಳೆ ಕುಪಿತಗೊಂಡ ರುದ್ರಪ್ಪ, ಏಕಾಏಕಿ ಪೇದೆ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. 

ಅಲ್ಲದೇ ಇದನ್ನು ತಡೆಯಲು ಬಂದ ಎಸೈ ಅಂಜಿನಪ್ಪ ಅವರನು ರಸ್ತೆಯಲ್ಲಿ ಉರುಳಾಡಿಸಿ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಪೊಲೀಸರ ನೆರವಿಗೆ ಆಗಮಿಸಿದ್ದು, ಅವರನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.