ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ!
ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ| ತಮಾಷೆಯಲ್ಲ ಇಲ್ಲಿದೆ ನೋಡಿ ಅಚ್ಚರಿಪಡಿಸುವ ಸುದ್ದಿ
ತಿರುವನಂತಪುರಂ[ಜು.28]: ಪ್ರಾಣಿಗಳು ವಾಹನ ಸವಾರರಿಗೆ ಅಡ್ಡಿಪಡಿಸುವುದು ಎಲ್ಲಡೆ ಸಾಮಾನ್ಯ. ಆದರೆ, ಕೇರಳದಲ್ಲಿ ಅಲಪುಳದಲ್ಲಿ ಅಪರೂಪದ ಸನ್ನಿವೇಶವೊಂದು ಎಲ್ಲರ ಗಮನ ಸೆಳೆದಿದೆ.
ನೂರಾರು ಬಾತುಕೋಳಿಗಳ ಹಿಂಡು ರಸ್ತೆಯಲ್ಲಿ ನಿಧಾವಾಗಿ ನಡೆದು ಹೋಗಿದ್ದರಿಂದ ಅವು ರಸ್ತೆ ದಾಟುವವರೆಗೂ ವಾಹನ ಸವಾರರು ತಾಳ್ಮೆಯಿಂದ ಕಾಯಬೇಕಾಗಿ ಬಂತು.
ಬಾತುಕೋಳಿಗಳ ಹಿಂಡು ರಸ್ತೆ ದಾಟುವ ವಿಡಿಯೋ ಇದೀಗ ವೈರಲ್ ಆಗಿದೆ.