ಶಾಲೆಯೊಂದರಲ್ಲಿ ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕ್ಲಾಸ್‌!. ಎಲ್ಲಿ। ಏನು ಕಥೆ? ಇಲ್ಲಿದೆ ಡಿಟೇಲ್ಸ್

ನವದೆಹಲಿ, ಅ.11: ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ತರಗತಿಯಾಗಿ ವಿಂಗಡಿಸಿದ ಘಟನೆ ದೆಹಲಿ ಪಾಲಿಕೆ ಶಾಲೆಯೊಂದರಲ್ಲಿ ನಡೆದಿದೆ. 

ಈ ಆರೋಪ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ. ವಜಿರಾಬಾದ್‌ನಲ್ಲಿರುವ ನವದೆಹಲಿ ಮುನ್ಸಿಪಾಲ್‌ ಮಂಡಳಿ(ಎನ್‌ಡಿಎಂಸಿ)ಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು. 

ಈ ಕುರಿತು ಬುಧವಾರ ಮಾತನಾಡಿದ ಸಚಿವ ಪ್ರಕಾಶ್‌ ಜಾವಡೇಕರ್‌, ‘ಈ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಆದಾಗ್ಯೂ, ವರದಿ ನೀಡಲು ಸೂಚಿಸಲಾಗಿದೆ,’ ಎಂದರು. 

ಇನ್ನು ದೆಹಲಿ ಡಿಸಿಎಂ ಮನೀಷ್‌ ಸಿಸೋಡಿಯಾ ಮಾತನಾಡಿ, ‘ಇದೊಂದು ಗಂಭೀರ ವಿಚಾರವಾದ್ದು, ದೇಶದ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತದೆ. ಈ ಬಗ್ಗೆ ತನಿಖೆ ಕೈಗೊಂಡು ಶುಕ್ರವಾರದೊಳಗೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇನೆ,’ಎಂದಿದ್ದಾರೆ.