ಸಿಎಂ ಸಿದ್ರಾಮಯ್ಯ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ನಿಂದ ಹೊರಬಂದು ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿರುವ ಶ್ರೀನಿವಾಸ್ ಪ್ರಸಾದ್ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ಈಗಾಗಲೇ ಕಾಂಗ್ರೆಸ್, ಹಾಗೂ ಬಿಜೆಪಿ ಕ್ಷೇತ್ರಗಳಲ್ಲಿ ಬೇರೂರಿದ್ದು ಪರೋಕ್ಷವಾಗಿ ಬಲ ಪ್ರದರ್ಶನ ಶುರು ಮಾಡಿವೆ.

ಮೈಸೂರು(ಮಾ.10): ಸಿಎಂ ಸಿದ್ರಾಮಯ್ಯ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ನಿಂದ ಹೊರಬಂದು ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿರುವ ಶ್ರೀನಿವಾಸ್ ಪ್ರಸಾದ್ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ಈಗಾಗಲೇ ಕಾಂಗ್ರೆಸ್, ಹಾಗೂ ಬಿಜೆಪಿ ಕ್ಷೇತ್ರಗಳಲ್ಲಿ ಬೇರೂರಿದ್ದು ಪರೋಕ್ಷವಾಗಿ ಬಲ ಪ್ರದರ್ಶನ ಶುರು ಮಾಡಿವೆ.

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಹಾಗೂ ಸಚಿವ ಮಹದೇವ್ ಪ್ರಸಾದ್ ನಿಧನದಿಂದ ತೆರವಾಗಿರುವ ಚಾಮರಾಜನಗರದ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ ಆಗಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು ಉಭಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ. 

ಏಪ್ರಿಲ್ 9ಕ್ಕೆ ಬೈ ಎಲೆಕ್ಷನ್: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಮುಹೂರ್ತ ಫಿಕ್ಸ್

ಸಿಎಂ ಸಿದ್ದರಾಮಯ್ಯಗೆ ಸೆಡ್ಡು ಹೊಡೆದು ಪಕ್ಷದಿಂದ ಹೊರಬಂದಿರುವ ಶ್ರೀನಿವಾಸ್ ಪ್ರಸಾದ್ ಪ್ರತಿನಿಧಿಸೋ ಕ್ಷೇತ್ರ ನಂಜನಗೂಡು , ಹಾಗೂ ಮಹದೇವ್ ಪ್ರಸಾದ್ ನಿಧನದಿಂದ ತೆರವಾಗಿರೋ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಡೇಟ್ ಫಿಕ್ಸ್ ಮಾಡಿದೆ. ಏಪ್ರಿಲ್ 9 ಕ್ಕೆ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ಕ್ಕೆ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕಡೆಯ ದಿನವಾಗಿದೆ. ಮಾರ್ಚ್ 22 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್ 24 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.

ಅಖಾಡದಲ್ಲಿರುವ ಸಂಭಾವ್ಯರು: ನಂಜನಗೂಡು ಕ್ಷೇತ್ರ

ಅಖಾಡದಲ್ಲಿ ಸ್ಪರ್ಧಿಸುವ ಸಂಭ್ಯಾವರ ಬಗ್ಗೆ ನೋಡುವುದಾದರೆ ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಇನ್ನೂ ಕಾಂಗ್ರೆಸ್ ನಿಂದ ಕಳೆದ ಬಾರಿ ಜೆಡಿಎಸ್'ನಿಂದ ಸ್ಪರ್ಧಿಸಿದ್ದ ಕಳಲೇ ಕೇಶವಮೂರ್ತಿ ಸ್ಪರ್ಧಿಸೋ ಸಾಧ್ಯತೆ ದಟ್ಟಾವಾಗಿದ್ದು ಎರಡು ಪಕ್ಷಗಳ ನಡುವೆ ಬಿಗ್ ಫೈಟ್ ನಡೆಯಲಿದೆ.

ಅಖಾಡದಲ್ಲಿರೋ ಸಂಭಾವ್ಯರು: ಗುಂಡ್ಲುಪೇಟೆ ಕ್ಷೇತ್ರ

ಗುಂಡ್ಲುಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ ನಿ'ದ ದಿವಂಗತ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವಪ್ರಸಾದ್ ಸ್ಪರ್ಧಿಸೋ ಸಾಧ್ಯತೆ ಇದೆ. ಬಿಜೆಪಿಯಿಂದ ನಿರಂಜನ್ ಕುಮಾರ್ ಕಣಕ್ಕಿಳಿಯುವುದು ಖಚಿತವಾಗಿದೆ. ಜೆಡಿಎಸ್ ನಿಂದ ಸ್ಪರ್ಧಿಸೋ ಅಭ್ಯರ್ಥಿ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರ ಬಂದಿಲ್ಲ.

ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿರುವ ಈ ಉಪಚುನಾವಣೆಯನ್ನು ಗೆಲ್ಲಲೇಬೇಕೆೆಂದು ಪ್ರತಿಯೊಂದು ಪಕ್ಷಗಳು ಪಣತೊಟ್ಟಿವೆ. ಆದ್ರೆ ಬರದ ಬೇಗೆಯಲ್ಲಿ ಬೆಂದಿರುವ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಕಾದು ನೋಡಬೇಕು.