ಸಿಎಂ ನೇತೃತ್ವದಲ್ಲಿ ಆ.16 ರಂದು ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್  ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಪದ್ಮಾವತಿ ಹೇಳಿದ್ದಾರೆ.

ಬೆಂಗಳೂರು (ಆ.12): ಸಿಎಂ ನೇತೃತ್ವದಲ್ಲಿ ಆ.16 ರಂದು ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಪದ್ಮಾವತಿ ಹೇಳಿದ್ದಾರೆ.

ಹೇಗಿರುತ್ತೆ ಕ್ಯಾಂಟೀನ್?

ಒಂದು ಕ್ಯಾಂಟೀನ್’ನಲ್ಲಿ 7 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಅಡುಗೆ ಮನೆಯಿಂದ ಕ್ಯಾಂಟೀನ್’ಗೆ ಊಟ ರವಾನೆ ಮಾಡುವ ಕ್ರಮ ಹೀಗಿರುತ್ತದೆ; ಬೆಳಿಗ್ಗೆ 7.30 ರಿಂದ 10.30 ರವರೆಗೆ ತಿಂಡಿ, ಮಧ್ಯಾಹ್ನ 12.30 ಯಿಂದ 2.30 ವರೆಗೆ ಊಟ, ರಾತ್ರಿ 7.30 ಯಿಂದ 9.30 ವರೆಗೆ ಊಟ ಲಭ್ಯವಿರುತ್ತದೆ. ಪ್ರತಿ ಕ್ಯಾಂಟೀನ್’ನಲ್ಲೂ ಡಿಜಿಟಲ್ ಡಿಸ್ಪ್ಲೇ ಅಳವಡಿಸಲಾಗಿದ್ದು, ಎಷ್ಟು ಊಟ ಲಭ್ಯವಿದೆ ಎನ್ನುವುದರ ಮಾಹಿತಿ ಡಿಸ್ಪ್ಲೇನಲ್ಲಿ ಮಾಹಿತಿ ಇರಲಿದೆ ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ. 

ಪ್ರತಿ ಕ್ಯಾಂಟೀನ್’ಗೆ ಹೆಲ್ತ್ ಆಫೀಸರ್ ಇರಲಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯಿಂದ ಕಾಲ ಕಾಲಕ್ಕೆ ತಪಾಸಣೆ ನಡೆಸುವಂತೆ ಮನವಿ ಮಾಡಲಾಗುವುದು. ಎಲ್ಲಾ ಕ್ಯಾಂಟೀನ್’ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಗುಣಮಟ್ಟ, ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.ಇಂದಿರಾ ಕ್ಯಾಂಟೀನ್’ಗಾಗಿ ಹೊಸ ಯಪನ್ನು ಶೀಘ್ರದಲ್ಲಿಯೇ ಅನಾವರಣಗೊಳಿಸಲಿದ್ದು, ಈ ಆಪ್’ನಲ್ಲಿ ಹತ್ತಿರದ ಐದು ಕ್ಯಾಂಟೀನ್’ನ ಮಾಹಿತಿ ಹಾಗೂ ಆ ದಿನದ ಮೆನು ಕೂಡಾ ಲಭ್ಯವಿರಲಿದೆ. ದೂರುಗಳು ಇದ್ದರೂ ಅದನ್ನು ಆಯಪ್’ನಲ್ಲಿ ಹೇಳಲು ಅವಕಾಶವಿದೆ. ಕ್ಯಾಂಟೀನ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕಳುಹಿಸಿದರೆ ಉತ್ತಮ ಫೋಟೋಗೆ ಲಕ್ಷ ಬಹುಮಾನ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.