ನೋಟುಗಳ ಅಮಾನ್ಯದ ನಂತರವಂತೂ ಆಧಾರ್ ನೋಂದಣಿ ಹಾಗೂ ಅದರ ಮೂಲಕ ನಡೆಸುವ ಹಣಕಾಸು ವಹಿವಾಟುಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದೂ ಮೂಲಗಳು ತಿಳಿಸಿವೆ.

ನವದೆಹಲಿ(ಜ.28):ದೇಶದಲ್ಲಿ 18 ವರ್ಷ ಮೇಲ್ಪಟ್ಟ ಶೇ.99ರಷ್ಟು ಮಂದಿ ಆಧಾರ್ ಹೊಂದಿದ್ದಾರೆ. ಅಂದರೆ 111 ಕೋಟಿಗಿಂತಲೂ ಹೆಚ್ಚು ಮಂದಿ ಭಾರತೀಯರು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ.

ಇದು ಆಧಾರ್ ಪಾವತಿ ವ್ಯವಸ್ಥೆ(ಎಇಪಿಎಸ್)ಯಾದ ಆಧಾರ್ ಪೇಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ನಗದುರಹಿತ ಆರ್ಥಿಕತೆ ಸೃಷ್ಟಿಸಬೇಕು ಎಂಬ ಕೇಂದ್ರ ಸರ್ಕಾರದ ಆಕಾಂಕ್ಷೆಗೆ ನೀರೆರೆದಿದೆ.

ಈಗ ಬಹುತೇಕ ಮಂದಿ ಆಧಾರ್ ಹೊಂದಿರುವ ಕಾರಣ, ತನ್ನ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳಲ್ಲಿ ಈ ವಿಶಿಷ್ಟ ಗುರುತಿನ ಸಂಖ್ಯೆಯ ಬಳಕೆಯನ್ನು ಹೆಚ್ಚಿಸುವುದು ಹಾಗೂ ಅದರ ಮೂಲಕವೇ ಸಬ್ಸಿಡಿ ವಿತರಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಆಧಾರ್ ಬಳಕೆಯನ್ನು ಪಡಿತರ, ಎಲ್‌ಪಿಜಿ ಮತ್ತು ಉದ್ಯೋಗ ಖಾತ್ರಿ ಯೋಜನೆಗೆ ಸೀಮಿತಗೊಳಿಸಿದ್ದರೂ, 2 ವರ್ಷಗಳಲ್ಲಿ ಸರ್ಕಾರವು ಬರೋಬ್ಬರಿ ₹36 ಸಾವಿರ ಕೋಟಿಯನ್ನು ಉಳಿತಾಯ ಮಾಡಿದೆ. ನೋಟುಗಳ ಅಮಾನ್ಯದ ನಂತರವಂತೂ ಆಧಾರ್ ನೋಂದಣಿ ಹಾಗೂ ಅದರ ಮೂಲಕ ನಡೆಸುವ ಹಣಕಾಸು ವಹಿವಾಟುಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದೂ ಮೂಲಗಳು ತಿಳಿಸಿವೆ.