ಜನವರಿ 20ರಂದು ಒಂದೇ ದಿನದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ 980 ವಿಮಾನಗಳು ಹಾರಾಡಿವೆ. ಕಳೆದ ಡಿಸೆಂಬರ್ 6ರಂದು 974 ವಿಮಾನಗಳು ಹಾರಾಡಿದ್ದವು. ಮುಂಬೈ'ನಲ್ಲಿ ಪ್ರತಿ ಗಂಟೆಯಲ್ಲಿ 52 ವಿಮಾನಗಳು ಹಾರಾಡುತ್ತವೆ.
ಮುಂಬೈ(ಫೆ.04): ವಿಮಾನ ಹಾರಾಟದಲ್ಲಿ ಮುಂಬೈ ವಿಮಾನ ನಿಲ್ದಾಣ ಹೊಸ ದಾಖಲೆ ಬರೆದಿದೆ. 24 ಗಂಟೆಗಳಲ್ಲಿ 980 ವಿಮಾನ ಹಾರಾಡುವ ಮೂಲಕ ತಾನೇ ನಿರ್ಮಿಸಿದ ದಾಖಲೆಯನ್ನು ಮುರಿದಿದೆ.
ಜನವರಿ 20ರಂದು ಒಂದೇ ದಿನದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ 980 ವಿಮಾನಗಳು ಹಾರಾಡಿವೆ. ಕಳೆದ ಡಿಸೆಂಬರ್ 6ರಂದು 974 ವಿಮಾನಗಳು ಹಾರಾಡಿದ್ದವು. ಮುಂಬೈ'ನಲ್ಲಿ ಪ್ರತಿ ಗಂಟೆಯಲ್ಲಿ 52 ವಿಮಾನಗಳು ಹಾರಾಡುತ್ತವೆ. ಮುಂಬೈನ ವಿಮಾನ ನಿಲ್ದಾಣ ವಿಶ್ವದ 2ನೇ ಅತೀ ದೊಡ್ಡ ವಿಮಾನ ನಿಲ್ದಾಣವಾಗಿದೆ.
ಇಂಗ್ಲೆಂಡಿನ ಗಾಟ್ವಿಕ್ ವಿಮಾನ ನಿಲ್ದಾಣ ವಿಶ್ವದ ಏಕ ರನ್'ವೇ ವಿಮಾನ ನಿಲ್ದಾಣವಾಗಿದ್ದು, 2018ರ ಬೇಸಿಗೆಯಲ್ಲಿ ನಿತ್ಯ 870 ವಿಮಾನಗಳನ್ನು ಓಡಿಸುವ ಭರವಸೆಯಿಟ್ಟುಕೊಂಡಿದೆ.ಈ ನಿಲ್ದಾಣದಲ್ಲಿ 1971ರಿಂದ ರಾತ್ರಿಯ ಕೆಲವು ಗಂಟೆಗಳನ್ನು ಹೊರತುಪಡಿಸಿ ನಿತ್ಯವು 19 ಗಂಟೆಗಳ ಕಾಲ ವಿಮಾನ ನಿಲ್ದಾಣಗಳ ಹಾರಾಟವಿರುತ್ತದೆ. ಪ್ರತಿ ಗಂಟೆಯಲ್ಲಿ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಆಗುವ ವಿಮಾನಗಳ ಸಂಖ್ಯೆ 55.
