ಆಲಪ್ಪುಳ(ನ.1): ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಬರೆಯುವುದು ಸಾಮಾನ್ಯ. ಇನ್ನೂ ಕೆಲವರು ಅರ್ಧ ವಯಸ್ಸು ದಾಟಿದ ಬಳಿಕ ಎಕ್ಸಾಂ ಎದುರಿಸುತ್ತಾರೆ. ಆದರೆ ಕೇರಳದಲ್ಲಿ 96 ವರ್ಷ ವಯಸ್ಸಿನ ಹಣ್ಣು ಹಣ್ಣು ಮುದುಕಿ ಪರೀಕ್ಷೆ ಬರೆದು ಫಲಿತಾಂಶದಲ್ಲಿ ದಿಗ್ಭ್ರಮೆ ಮೂಡಿಸಿದ್ದಾರೆ.

ಹೌದು, ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ್ದ  ‘ಅಕ್ಷರಲಕ್ಷಂ’​​ ಎನ್ನುವ ಪರೀಕ್ಷೆಯಲ್ಲಿ ಆಲಪ್ಪುಳ ಜಿಲ್ಲೆಯ ಕಾರ್ತಿಯಾನಿ ಅಮ್ಮ ಎನ್ನುವ 96ರ ಅಜ್ಜಿ ಪರೀಕ್ಷೆ ಬರೆದಿದ್ದರು.

ಸದ್ಯ ಈ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಅಜ್ಜಿ ನೂರಕ್ಕೆ 98 ಅಂಕ ಪಡೆದು ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ. ಪರೀಕ್ಷೆಯಲ್ಲಿ ಗಣಿತ ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ನೀಡಲಾಗಿತ್ತು. ಒಟ್ಟಾರೆ 42,933 ಮಂದಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.