ಲೋಕಸಭೆಯ ಕಲಾಪದಲ್ಲಿ ಬುಧವಾರ ಮಾತನಾಡಿದ ಸಚಿವ ಸಿಂಗ್, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿರುವ ಬಗ್ಗೆ ಭರವಸೆ ನೀಡಿದರು.
ನವದೆಹಲಿ(ಫೆ.08): ಆಂತರಿಕ ಕಲಹ, ನೈಸರ್ಗಿಕ ವಿಕೋಪಗಳು, ಯುದ್ಧ ಪೀಡಿತ ಮತ್ತು ಆರ್ಥಿಕ ಹಿಂಜರಿಕೆಯ ರಾಷ್ಟ್ರಗಳಿಂದ ಎರಡು ವರ್ಷಗಳಲ್ಲಿ 95,665 ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ಲೋಕಸಭೆಗೆ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ. ಲೋಕಸಭೆಯ ಕಲಾಪದಲ್ಲಿ ಬುಧವಾರ ಮಾತನಾಡಿದ ಸಚಿವ ಸಿಂಗ್, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿರುವ ಬಗ್ಗೆ ಭರವಸೆ ನೀಡಿದರು. ವಿದೇಶದಲ್ಲಿರುವ 1,23,098 ಭಾರತೀಯರು ಸರ್ಕಾರದ ಬೆಂಬಲ ಕೋರಿದ್ದರು. ಇದರಲ್ಲಿ ಎರಡು ವರ್ಷಗಳಲ್ಲಿ 95,665 ಮಂದಿಯನ್ನು ವಾಪಸ್ ಕರೆತರಲಾಗಿದೆ ಎಂಬ ಭಾರತೀಯ ದೂತವಾಸ ಕಚೇರಿಗಳ ಮಾಹಿತಿಯನ್ನು ಸಚಿವರು ನೀಡಿದರು.
