Asianet Suvarna News Asianet Suvarna News

ಪೊಲೀಸರಿಗೆ 1.50 ಲಕ್ಷ ದಾನ ಮಾಡಿದ 9 ವರ್ಷದ ಬಾಲೆ! ಕಾರಣ ನೋಡಿ ಶಹಬ್ಬಾಸ್ ಅಂತೀರಾ

ತಾನು ಉಳಿಸಿದ್ದ 1.50;ಕ್ಷ ದಾನ ಮಾಡಿದ ಬಾಲಕಿ| ಪೊಲೀಸರಿಗೂ ಅಚ್ಚರಿ ಮೂಡಿಸಿದೆ ಹಣ ನೀಡಲು ಕಾರಣವಾದ ಆ ಅಂಶ| ಆಯುಕ್ತರಿಂದಲೇ ಪ್ರಶಂಸೆ

9 year old girl donates savings to police department for CCTVs
Author
Chennai, First Published Mar 7, 2019, 3:26 PM IST

ಚೆನ್ನೈ[ಮಾ.07]: 9 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ಈವರೆಗೆ ಉಳಿಸಿದ ಸುಮಾರು 1.50 ಲಕ್ಷ ಮೊತ್ತವನ್ನು ಚೆನ್ನೈ ನಗರ ಪೊಲೀಸರಿಗೆ ದಾನಗೈದಿದ್ದಾಳೆ. ಈ ಹಣದಿಂದ ನಗರದೆಲ್ಲೆಡೆ ಸಿಸಿಟಿವಿ ಅಳವಡಿಸಲು ಮನವಿ ಮಾಡಿಕೊಂಡಿದ್ದಾಳೆ.

ಶ್ರೀಹಿತಾಳ ಈ ಕಾಳಜಿಯನ್ನು ನೋಡಿದ ನಗರ ಪೊಲೀಸ್ ಆಯುಕ್ತ ಎ. ಕೆ. ವಿಶ್ವನಾಥನ್ ಆಕೆಯನ್ನು ತನ್ನ ಕಚೇರಿಗೆ ಆಹ್ವಾನಿಸಿ ಪ್ರಶಂಸಿಸಿದ್ದಾರೆ. ಅಲ್ಲದೇ ಸುಸದ್ದಿಗೋಷ್ಟಿಯನ್ನು ಆಯೋಜಿಸಿ ಆ ಪುಟ್ಟ ಬಾಲಕಿಯ ಸಾಧನೆಯನ್ನು ಕೊಂಡಾಡಿದ್ದಾರೆ.

ಇಂತಹ ಒಂದು ಯೋಚನೆ ಆ ಪುಟ್ಟ ಬಾಲಕಿಗೆ ಎಲ್ಲಿಂದ ಬಂತು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರಿಸಿರುವ ಶ್ರೀಹಿತಾ 'ನನ್ನ ತಂದೆಯ ಕಚೇರಿಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾದ ಉಪಯೋಗಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿದ್ದರು. ಇದನ್ನು ನೋಡಿದ ಬಳಿಕ ನನ್ನಲ್ಲಿರುವ ಹಣವನ್ನು ಸಿಸಿಟಿಗಾಗಿ ದಾನ ಮಾಡುವ ಯೋಚನೆ ಬಂತು' ಎಂದಿದ್ದಾರೆ.

Follow Us:
Download App:
  • android
  • ios