Asianet Suvarna News Asianet Suvarna News

ಉಗ್ರ ಸಂಘಟನೆ ಜೊತೆ ಸಂಪರ್ಕ ಆರೋಪ: 9 ಮುಸ್ಲಿಂ ಸಚಿವರ ತಲೆದಂಡ!

ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಆರೋಪ| ಗಂಭೀರ ಆರೋಪದಡಿ 9 ಮುಸ್ಲಿಂ ಸಚಿವರ ತಲೆದಂಡ| ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿ| ನಿಷೇಧಿತ ಉಗ್ರ ಸಂಘಟನೆ ಎನ್‌ಟಿಜೆ ಜೊತೆ ಸಂಪರ್ಕ ಹೊಂದಿದ್ದ ಆರೋಪ| ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ 9 ಮುಸ್ಲಿಂ ಸದಸ್ಯರು|

9 Muslim Ministers in Lanka Resign Over Links With Attackers
Author
Bengaluru, First Published Jun 4, 2019, 3:10 PM IST

ಕೊಲಂಬೋ(ಜೂ.04): ಮಹತ್ವದ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, 9 ಮುಸ್ಲಿಂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಈಸ್ಟರ್ ಆತ್ಮಾಹುತಿ ದಾಳಿ ನಡೆಸಿದ ಇಸ್ಲಾಮಿಕ್ ಸಂಘಟನೆಯೊಂದಿಗೆ ಈ 9 ಸಚಿವರು ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಆತ್ಮಾಹುತಿ ದಾಳಿ ನಡೆಸಿದ ನ್ಯಾಷನಲ್ ಥೌಹೀತ್  ಜಮಾತ್ (ಎನ್‌ಟಿಜೆ) ನಿಷೇಧಿತ ಉಗ್ರ ಸಂಘಟನೆ ಜೊತೆಗೆ ಈ ಸಚಿವರು ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಇವರ ರಾಜೀನಾಮೆಗೆ ಆಗ್ರಹ ಹೆಚ್ಚಾಗಿತ್ತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿದ್ದ 9 ಸಚಿವರು ರಾಜೀನಾಮೆ ನೀಡಿದ್ದಾರೆ.

225 ಸದಸ್ಯ ಬಲ ಹೊಂದಿರುವ ಲಂಕಾ ಸಂಸತ್ ನಲ್ಲಿ 19 ಮುಸ್ಲಿಂ ಸಂಸದರಿದ್ದು, ಈ ಪೈಕಿ 9 ಜನ ಕ್ಯಾಬಿನೆಟ್, ರಾಜ್ಯ ಹಾಗೂ ಡೆಪ್ಯುಟಿ ಸಚಿವರಾಗಿ ನೇಮಕಗೊಂಡಿದ್ದರು. 

Follow Us:
Download App:
  • android
  • ios