8-9 ಕಂಪನಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೇ ಇರುವುದು ಸಂಭಾವ್ಯ ಬೆದರಿಕೆ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಸಾಧ್ಯತೆ ಇದೆ.
ನವದೆಹಲಿ(ಏ.29): ಭಾರತದಲ್ಲಿ ನೋಂದಾಯಿತ 9 ಲಕ್ಷ ಕಂಪನಿಗಳು ವಾರ್ಷಿಕ ತೆರಿಗೆ ರಿಟರ್ನ್‌ಗಳನ್ನು ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿಲ್ಲ. ಅವು ಅಕ್ರಮವಾಗಿ ಹಣ ವರ್ಗಾಯಿಸಿರುವ ಸಾಧ್ಯತೆ ಇದೆ ಎಂದು ಆದಾಯ ಕಾರ್ಯದರ್ಶಿ ಹಂಸಮುಖ ಅಯಾ ತಿಳಿಸಿದ್ದಾರೆ.
ನೋಂದಣಿಯನ್ನು ರದ್ದುಗೊಳಿಸಿಕೊಳ್ಳುವಂತೆ ಕಂಪನಿಗಳ ವ್ಯವಹಾರಗಳ ಸಚಿವಾಲಯ ನೋಟಿಸ್ ನೀಡಿದೆ. 15 ಲಕ್ಷ ಕಂಪನಿಗಳ ಪೈಕಿ 6 ಲಕ್ಷ ಕಂಪನಿಗಳು ಮಾತ್ರ ಆದಾಯ ತೆರಿಗೆ ರಿಟರ್ನ್‌ಗಳನ್ನು ಪಾವತಿಸಿವೆ. 8-9 ಕಂಪನಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೇ ಇರುವುದು ಸಂಭಾವ್ಯ ಬೆದರಿಕೆ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಸಾಧ್ಯತೆ ಇದೆ. ಹೀಗಾಗಿ ಈ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುವುದು ನಮಗೆ ಬೇಕಾಗಿಲ್ಲ. ಈ ಕುರಿತು ತನಿಖೆ ನಡೆಸಲು ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಅಯಾ ಹೇಳಿದ್ದಾರೆ.
