ಲೆಕ್ಕ ಪರಿಶೋಧಕ ಹುದ್ದೆಗೆ ಪರೀಕ್ಷೆ ಬರೆದಿದ್ದ ಎಲ್ಲಾ ಅಭ್ಯರ್ಥಿಗಳೂ ಕೂಡ ಫೇಲ್ ಆಗಿದ್ದಾರೆ. 80 ಅಕೌಂಟೆಂಟ್ ಹುದ್ದೆಗೆ ಕಳೆದ ಜ.7ರಂದು ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಯಾವುದೇ ಅಭ್ಯರ್ಥಿ ಉತ್ತೀರ್ಣನಾಗಿಲ್ಲ ಎಂದು ಗೋವಾ ಸರ್ಕಾರ ಪ್ರಕಟಿಸಿದೆ.
ನವದೆಹಲಿ: ಗೋವಾ ಸರ್ಕಾರದ ಲೆಕ್ಕಪರಿಶೋಧಕರ ಹುದ್ದೆಗೆ ನಡೆದ ಪರೀಕ್ಷೆ ವೇಳೆ ಪರೀಕ್ಷೆ ಬರೆದ ಎಲ್ಲಾ 8000 ಅಭ್ಯರ್ಥಿಗಳು ಫೇಲ್ ಆಗಿದ್ದಾರೆ. 80 ಅಕೌಂಟೆಂಟ್ ಹುದ್ದೆಗೆ ಕಳೆದ ಜ.7ರಂದು ಪರೀಕ್ಷೆ ನಡೆಸಲಾಗಿತ್ತು.
ಈ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಯಾವುದೇ ಅಭ್ಯರ್ಥಿ ಉತ್ತೀರ್ಣನಾಗಿಲ್ಲ ಎಂದು ಸರ್ಕಾರ ಪ್ರಕಟಿಸಿದೆ.
ಪರೀಕ್ಷೆಗಳಲ್ಲಿ 100 ಅಂಕಕ್ಕೆ 50 ಅಂಕ ಪಡೆಯುವಲ್ಲಿ ಎಲ್ಲಾ 8000 ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಗಣಿತ, ಸಾಮಾನ್ಯ ಜ್ಞಾನ ಮತ್ತು ಲೆಕ್ಕಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗಿತ್ತು.
