ಇಂಥದ್ದೊಂದು ತಂತ್ರಜ್ಞಾನ ಬರಲಿದೆ ಎಂದು ಶತಮಾನದ ಹಿಂದೆ ಹೇಳಿದ್ದರೆ, ಜನ ನಂಬುತ್ತಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಸುದ್ದಿಯ ಪ್ರಕಾರ, 800 ವರ್ಷಗಳ ಹಿಂದೆಯೇ ಅನ್ಯಗ್ರಹ ಜೀವಿಗಳು ಬಳಸಿದ್ದೆನ್ನಲಾದ ಬ್ಯಾಬಿಲೋನಿಯನ್‌ ಸೆಲ್‌ಫೋನ್‌ ಆಸ್ಟ್ರಿಯಾದಲ್ಲಿ ಪತ್ತೆಯಾಗಿದೆ.

ಇಂದು ಬಹುತೇಕ ಮಂದಿಯ ಜೀವನದಲ್ಲಿ ಮೊಬೈಲ್‌ ಫೋನ್‌ ಇಲ್ಲದೆ, ಅವರ ದಿನಚರಿಯೇ ನಡೆಯುವುದಿಲ್ಲವೇನೋ ಅನ್ನುವಂತಹ ಪರಿಸ್ಥಿತಿಯಿದೆ. ಇಂಥದ್ದೊಂದು ತಂತ್ರಜ್ಞಾನ ಬರಲಿದೆ ಎಂದು ಶತಮಾನದ ಹಿಂದೆ ಹೇಳಿದ್ದರೆ, ಜನ ನಂಬುತ್ತಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಸುದ್ದಿಯ ಪ್ರಕಾರ, 800 ವರ್ಷಗಳ ಹಿಂದೆಯೇ ಅನ್ಯಗ್ರಹ ಜೀವಿಗಳು ಬಳಸಿದ್ದೆನ್ನಲಾದ ಬ್ಯಾಬಿಲೋನಿಯನ್‌ ಸೆಲ್‌ಫೋನ್‌ ಆಸ್ಟ್ರಿಯಾದಲ್ಲಿ ಪತ್ತೆಯಾಗಿದೆ.

ಹಳೆಯ ನೋಕಿಯಾ ಮಾದರಿಯ ಕುತೂಹಲಕಾರಿ ವಸ್ತುವಿನ ಫೋಟೊ ಕೂಡ ಅದರೊಂದಿಗೆ ಲಗತ್ತಿಸಲಾಗಿತ್ತು. ಈ ಫೋಟೊ, ಸುದ್ದಿ ಭಾರೀ ವೈರಲ್‌ ಆಗಿತ್ತು.

ಸುದ್ದಿಯ ಬೆನ್ನುಹತ್ತಿ ಪರಿಶೀಲಿಸಿದಾಗ, ಇದು 2012ರಲ್ಲಿ ಜರ್ಮನ್‌ ಶಿಲ್ಪಿ ಕಾಲ್‌ರ್‍ ವೈನ್‌ಗಾಟ್ರ್ನರ್‌ ತಯಾರಿಸಿದ ಆವೆಮಣ್ಣಿನ ಪ್ರತಿಕೃತಿ ಎಂಬುದು ಗೊತ್ತಾಗಿದೆ. ನೋಕಿಯಾ ಮಾದರಿಯ ಈ ಪ್ರತಿಕೃತಿಯಲ್ಲಿ ಪ್ರಾಚೀನ ಸುಮೇರಿಯಾ ಭಾಷೆಯ ಅಕ್ಷರಗಳನ್ನು ಕೆತ್ತಲಾಗಿದೆ. ಈ ಪ್ರತಿಕೃತಿಯ ಫೋಟೊವನ್ನು ವೈನ್‌ಗಾಟ್ರ್ನರ್‌ ‘ಬ್ಯಾಬಿಲೋನೋಕಿಯಾ' ಎಂಬ ತಲೆಬರಹದೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನು ಬಳಸಿಕೊಂಡು, ಸುದ್ದಿ ವಾಹಿನಿಯೊಂದು ತಪ್ಪಾಗಿ ವರದಿ ಮಾಡಿತ್ತು. ಹೀಗಾಗಿ ಈ ಫೋಟೊ ಸತ್ಯವಾದರೂ, ಇದು 800 ವರ್ಷಗಳಷ್ಟುಹಳೆಯದ್ದು ಎಂಬುದು ಸುಳ್ಳು ಎಂದು ಸಾಬೀತಾಗಿದೆ.