ಬೆಂಗಳೂರು (ಆ. 08): ಸರಣಿ ರಜೆಗಳ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಶುಕ್ರವಾರ (ಆ.9) ರಾಜಧಾನಿ ಬೆಂಗಳೂರಿನಿಂದ 80 ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

ಶುಕ್ರವಾರ ವರಮಹಾಲಕ್ಷ್ಮೇ ಹಬ್ಬ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ, ಸೋಮವಾರ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಸರಣಿ ರಜೆ ಸಿಗಲಿದೆ. ರಜೆ ಸದುಪಯೋಗ ಪಡೆದು ಪ್ರವಾಸ, ದೂರದ ಊರುಗಳಿಗೆ ತೆರಳುವವರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ.

ಕೊಯಮತ್ತೂರು, ಕಣ್ಣನೂರು, ಎರ್ನಾಕುಲಂ, ಹೈದರಾಬಾದ್‌, ಕುಂಭಕೊಣಂ, ಕಾಂಚಿಪುರಂ, ಕೊಜಿಕೋಡ್‌, ಕೊಟ್ಟಾಯಂ, ಕೊಡೈಕನಾಲ್‌, ಮಂತ್ರಾಲಯ, ಮಾನಂದವಾಡಿ, ಮಧುರೈ, ನೆಲ್ಲೋರೆ, ಊಟಿ, ಪಾಲ್ಗಾಡ್‌, ಪೂನಾ, ಪಣಜಿ, ಪುದುಚೇರಿ, ಸೇಲಂ, ತಿರುಪತಿ, ತಿರುಚಿ, ಸೇಲಂ, ತಿರುಸೂರ್‌, ವಿಜಯವಾಡ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್‌ ಸಂಚರಿಸಲಿವೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.