ಬೆಳಗಿನ ಜಾವ 3.30ರ ವೇಳೆ ಭೋಪಾಲ್'ನ ಸೆಂಟ್ರಲ್ ಜೈಲಿನ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು 8 ಮಂದಿ ಉಗ್ರರು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದರು. ಜೈಲಿನಿಂದ ಪರಾರಿಯಾದ ಉಗ್ರರಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದ ಪೊಲೀಸರು ಇದೀಗ ಕೇವಲ 12 ಗಂಟೆಗಳಲ್ಲಿ ಗುಂಡಿಟ್ಟು ಕೊಂದಿದ್ದಾರೆ.

ಭೋಪಾಲ್(ಅ.31): ಜೈಲಿನಿಂದ ಪರಾರಿಯಾಗಿದ್ದ ಎಂಟೂ ಸಿಮಿ ಉಗ್ರರನ್ನು ಮಧ್ಯಪ್ರದೇಶದ ಭೋಪಾಲ್​ನ ಇಂತಕೇಡಿ ಎನ್​'ಕೌಂಟರ್ ಮಾಡಲಾಗಿದೆ.

ಬೆಳಗಿನ ಜಾವ 3.30ರ ವೇಳೆ ಭೋಪಾಲ್'ನ ಸೆಂಟ್ರಲ್ ಜೈಲಿನ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು 8 ಮಂದಿ ಉಗ್ರರು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದರು. ಜೈಲಿನಿಂದ ಪರಾರಿಯಾದ ಉಗ್ರರಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದ ಪೊಲೀಸರು ಇದೀಗ ಕೇವಲ 12 ಗಂಟೆಗಳಲ್ಲಿ ಗುಂಡಿಟ್ಟು ಕೊಂದಿದ್ದಾರೆ.

ಹತ್ಯೆಗೈಯ್ಯಲಾದ ಉಗ್ರರನ್ನು ಝಾಕಿರ್ ಹುಸೇನ್, ಶೇಕ್ ಅಹ್ಮದ್, ಮಹಮ್ಮದ್ ಸಾಲಿಕ್, ಮಜೀಬ್ ಶೇಖ್, ಮಹಮ್ಮದ್ ಖಿಲ್ಜಿ, ಮಹಮ್ಮದ್ ಖಾಲಿದ್, ಅಬ್ದುಲ್ ಮುಜೀರ್, ಅಮ್ಜದ್ ಖಾನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ಮಧ್ಯಪ್ರದೇಶದ ಭೋಪಾಲ್ ಸೆಂಟ್ರಲ್ ಜೈಲಿನಿಂದ 8 ಉಗ್ರರು ಪರಾರಿ ಭೋಪಾಲ್ ಸೆಂಟ್ರಲ್ ಜೈಲಿನಿಂದ 8 ಉಗ್ರರು ಪರಾರಿ