ನವದೆಹಲಿ[ಏ.26]: ಪ್ರಯಾಣಿಕರಿಗೆ ಹಣ ನೀಡುವಂತೆ ಒತ್ತಾಯಿಸುವ ಮೂಲಕ ಕಿರಿಕಿರಿ ಮಾಡುತ್ತಿದ್ದ 73000ಕ್ಕೂ ಹೆಚ್ಚು ಹಿಜಡಾಗಳನ್ನು ಕಳೆದ ನಾಲ್ಕು ವರ್ಷದಲ್ಲಿ ಬಂಧಿಸಲಾಗಿದೆ. ಅಂದರೆ ನಿತ್ಯ ಸರಾಸರಿ 50 ಹಿಜಡಾಗಳನ್ನು ವಶಕ್ಕೆ ಪಡೆಸಲಾಗಿದೆ ಎಂದು ರೈಲ್ವೆ ಇಲಾಖೆ, ಆರ್‌ಟಿಐ ಅಡಿ ಸಲ್ಲಿಸಲಾದ ಅರ್ಜಿಗೆ ಮಾಹಿತಿ ನೀಡಿದೆ.

ಈ ಪೈಕಿ 2015ರಲ್ಲಿ 13546, 2016ರಲ್ಲಿ 19800, 2017ರಲ್ಲಿ 18526 ಮತ್ತು 2018ರಲ್ಲಿ 20566 ಹಿಜಡಾಗಳನ್ನು ಬಂಧಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಕಿರುಕುಳ ಕುರಿತು ಸಾರ್ವಜನಿಕರ ದೂರಿನ ಆಧಾರದಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಅದು ಹೇಳಿದೆ.