ಹೆಚ್ಚುತ್ತಿದೆ ಭಾರತದಿಂದ ವಲಸೆ ಹೋಗುವ ಶ್ರೀಮಂತರ ಸಂಖ್ಯೆ

7000 super rich Indians shifted overseas in 2017
Highlights

ಭಾರತದಿಂದ ವಿದೇಶಗಳಿಗೆ ವಲಸೆ ಹೋಗುವ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ.

ನವದೆಹಲಿ : ಭಾರತದಿಂದ ವಿದೇಶಗಳಿಗೆ ವಲಸೆ ಹೋಗುವ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. 2017ನೇ ಇಸವಿಯಲ್ಲಿ ಒಟ್ಟು 7000 ಮಂದಿ ಮಿಲಿಯನೇರ್’ಗಳು ಭಾರತದಿಂದ ವಲಸೆ ಹೋಗಿದ್ದು ವಿಶ್ವದಲ್ಲಿ ವಲಸಿಗ ಮಿಲಿಯನೇರ್’ಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

 ಇನ್ನು ಚೀನಾ ಮೊದಲ ಸ್ಥಾನದಲ್ಲಿದ್ದು, ಕಳೆದ ವರ್ಷ ಚೀನಾದಿಂದ ಒಟ್ಟು 10,000 ಮಂದಿ ಮಿಲಿಯನೇರ್’ಗಳು  ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. 2016ರಲ್ಲಿ ಭಾರತದಿಂದ ವಲಸೆ ಹೋದ ಮಿಲಿಯನೇರ್’ಗಳ ಸಂಖ್ಯೆ 6000 ಇದ್ದರೆ 2015ನೇ ಇಸವಿಯಲ್ಲಿ 4000 ಮಂದಿ ವಲಸೆ ಹೋಗಿದ್ದಾರೆ. ಇನ್ನು ಕಳೆದ ವರ್ಷ ಹೆಚ್ಚು ಶ್ರೀಮಂತರು ವಲಸೆ ಹೋದ ರಾಷ್ಟ್ರಗಳಲ್ಲಿ ಟರ್ಕಿ, ಯುಕೆ, ಫ್ರಾನ್ಸ್, ರಷ್ಯಾ ದೇಶಗಳೂ ಸೇರಿವೆ.

loader