70 ವರ್ಷ ಹಿರಿಯ ಕೇಂದ್ರ ಮಂತ್ರಿಯೊಬ್ಬರು 20 ಅಡಿ ಎತ್ತರದಿಂದ ಜಿಗಿದು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ಯಾವಾಗಿನಿಂದ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಎಂಬ ಅಭಿಯಾನವನ್ನು ಆರಂಭಿಸಿತೋ ಅಂದಿನಿಂದ ಹಲವಾರು ಕೇಂದ್ರ ಸಚಿವರು ಇದನ್ನು ತಮ್ಮ ಕಾರ್ಯದ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಬಾರಿ ಮೋದಿ ಸರ್ಕಾರದ ಮಂತ್ರಿ ತಾವರ್ ಚಂದ್ ಗೆಹ್ಲೋಟ್ 'ಹಮ್ ಫಿಟ್ ತೋ ಇಂಡಿಯಾ ಫಿಟ್'ದೊಂದಿಗೆ 70 ವರ್ಷದ ಹರೆಯದಲ್ಲಿ ಯುವಕರಿಗೂ ಮಾಡಲಾಗದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ವಾಸ್ತವವಾಗಿ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಅಭಿಯಾನಕ್ಕೆ ತನ್ನ ಸಂದೇಶ ನೀಡಲು 70 ವರ್ಷದ ಕೇಂದ್ರೀಯ ಮಂತ್ರಿ ಥಾವರ್ ಚಂದ್ ಗೆಹ್ಲೋಟ್ 20 ಅಡಿ ಎತ್ತರದಿಂದ ಸ್ವಿಮಿಂಗ್ ಪೂಲ್ ಗೆ ಹಾರಿ ಡೈವ್ ಮಾಡಿದ್ದಾರೆ.
ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಿ ತಮ್ಮ ಈ ಡೇರಿಂಗ್ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸಂದೇಶವನ್ನೂ ಬರೆದಿರುವ ಗೆಹ್ಲೋಟ್ 'ಈಜುವುದು ಆರೋಗ್ಯಕ್ಕೆ ಲಾಭದಾಯಕ ವ್ಯಾಯಾಮವಾಗಿದೆ. ಇದರಿಂದಾಗಿ ನೀವು ಶಿಸ್ತು, ಅಮಯ ಪರಿಪಾಲನೆಯನ್ನು ಕಲಿಯುತ್ತೀರಿ'. ನಾನು ನಿಮ್ಮೆಲ್ಲರ ಬಳಿ ರಾಜವರ್ಧನ್ ರಾಥೋಡ್ ಆರಂಭಿಸಿದ #HumFitTohIndiaFit ಅಭಿಯಾನದಲ್ಲಿ ಭಾಗವಹಿಸಿ ನಿಮ್ಮನ್ನು ನೀವು ಹಾಗೂ ಭಾರತವನ್ನು ಆರೋಗ್ಯವಂತರನ್ನಾಗಿಸಿ ಎಂದು ವಿನಂತಿಸಿಕೊಳ್ಳುತ್ತೇನೆ' ಎಂದಿದ್ದಾರೆ.
ಗೆಹ್ಲೋಟ್ ರವರ ಈ ವಿಡಿಯೋವನ್ನು ರಾಜವರ್ಧನ್ ಸಿಂಗ್ ರಾಥೋಡ್ ಕೂಡಾ ಶೇರ್ ಮಾಡಿಕೊಳ್ಳುವುದರೊಂದಿಗೆ ಅಭಿನಂದಿಸಿದ್ದಾರೆ.
