ಜೆಡಿಎಸ್ ನಿಂದ ಅಮಾನತುಗೊಂಡಿರುವ ಏಳೂ ಮಂದಿಯೂ ಕಾಂಗ್ರೆಸ್ ಸೇರಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್'ಗೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯನವರೂ ಒಪ್ಪಿದ್ದಾರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ  ನಾವು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಬೆಂಗಳೂರು(ಮಾ.04): ಜೆಡಿಎಸ್ ನಿಂದ ಅಮಾನತುಗೊಂಡಿರುವ ಏಳೂ ಮಂದಿಯೂ ಕಾಂಗ್ರೆಸ್ ಸೇರಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್'ಗೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯನವರೂ ಒಪ್ಪಿದ್ದಾರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ನಾವು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಜೆಡಿಎಸ್ ನಿಂದ ಅಮಾನತುಗೊಂಡಿರುವ ಶಾಸಕರು ಬೆಂಗಳೂರಿನ ಸಿಎಂ ಗೃಹಕಚೇರಿಗೆ ಆಗಮಿಸಿ ಸಿಎಂ ಜತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಬಾಲಕೃಷ್ಣ, ಚುನಾವಣೆ ಹತ್ತಿರ ಬಂದಾಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದೇವೆ. ನಮಗೆಲ್ಲ ನಮ್ಮದೇ ಕ್ಷೇತ್ರಗಳಲ್ಲಿ ಟಿಕೆಟ್ ಕೊಡೋದಾಗಿ ಭರವಸೆ ನೀಡಿದ್ದಾರೆ. ನಾನು ಬಿಜೆಪಿ ಸೇರುವುದಿಲ್ಲ, ನಾವೆಲ್ಲರೂ ಒಗ್ಗೂಡಿ ‌ಕಾಂಗ್ರೆಸ್ ಸೇರುತ್ತೇವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಇನ್ನೋರ್ವ ಅಮಾನತುಗೊಂಡಿರುವ ಶಾಸಕ ಚೆಲುವರಾಯಸ್ವಾಮಿ, ನೂರಕ್ಕೆ ನೂರರಷ್ಟು ಜೆಡಿಎಸ್ ಪಕ್ಷದಲ್ಲಿ ನಾವಿಲ್ಲ. ಯುಗಾದಿ ಆದ ನಂತ್ರ ನಮ್ಮ ಕ್ಷೇತ್ರದಲ್ಲಿ ಜನರ ಸಭೆ ಇದೆ. ಎಲ್ಲರ ಸಲಹೆ ಪಡೆದು ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. ನಮ್ಮ ವಿಚಾರಗಳು ದೇವೇಗೌಡರ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಎಲ್ಲೇ ಹೋದರೂ ನಮ್ಗೆ ಟಿಕೆಟ್ ಗ್ಯಾರಂಟಿ ಇದೆ. ಯಾವಾಗ ಸೇರಬೇಕು ಎಂದು ಇನ್ನು ತೀರ್ಮಾನ ಮಾಡಿಲ್ಲ. ರಾಜಕೀಯದಿಂದ ದೇವೇಗೌಡ ಕುಟುಂಬದ ಜೊತೆ ದೂರ ಆಗಿದ್ದೇವೆ ಅಷ್ಟೇ, ವೈಯಕ್ತಿಕವಾಗಿ ದೇವೇಗೌಡರ ಮೇಲೆ ಅಪಾರ ಗೌರವ ಇದೆ ಎಂದ ಅವರು, ಯುಗಾದಿ ನಂತರ ನಮ್ಮ ರಾಜಕೀಯ ‌ನಡೆ ಘೋಷಿಸುತ್ತೇವೆ ಎಂದೂ ಹೇಳಿದ್ದಾರೆ.