ಕೊಳಚೆ ಗುಂಡಿಗೆ ಇಳಿದು 7 ಕಾರ್ಮಿಕರ ಸಾವು

news | Saturday, February 17th, 2018
Suvarna Web Desk
Highlights

ಕೊಳಚೆಗುಂಡಿ ಸ್ವಚ್ಛಗೊಳಿಸಲು ಇಳಿದಿದ್ದ 7 ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಅಮರಾವತಿ: ಕೊಳಚೆಗುಂಡಿ ಸ್ವಚ್ಛಗೊಳಿಸಲು ಇಳಿದಿದ್ದ 7 ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಪ್ರಕರಣದಲ್ಲಿ ತೀವ್ರ ಅಸ್ವಸ್ತಗೊಂಡಿರುವ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಖಾಸಗಿ ಸಂಸ್ಥೆಯೊಂದರ ಕೊಳಚೆ ಗುಂಡಿಯನ್ನು ಸ್ವಚ್ಛಗೊಳಿಸಲು ಮೊದಲು ಕಾರ್ಮಿಕನೊಬ್ಬ ಕೆಳಗಿಳಿದು ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದ. ಆತನ ರಕ್ಷಣೆಗೆ ಇಳಿದಿದ್ದ ಇತರರೂ ಅದೇ ಸ್ಥಿತಿಯನ್ನು ಎದುರಿಸಬೇಕಾಯಿತು.

Comments 0
Add Comment