Asianet Suvarna News Asianet Suvarna News

ಭೀಕರ ಅಪಘಾತ : ಸ್ಥಳದಲ್ಲೇ 7 ಸಾವು

ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

7 Killed After Vehicle Collides With Cars Due To Heavy Fog
Author
Bengaluru, First Published Dec 29, 2018, 1:38 PM IST
  • Facebook
  • Twitter
  • Whatsapp

ಅಂಬಾಲ : ಭಾರೀ ಹಿಮಪಾತದಿಂದಾಗಿ  ಚಂಡೀಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ  7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

 ಅಂಬಾಲ ಹಾಗೂ ಚಂಡೀಗರ್  ರಾಷ್ಟ್ರೀಯ ಹೆದ್ದಾರಿಯಲ್ಲಿ  ಎರಡು ಕಾರುಗಳು ಹಾಗೂ ಇನ್ನೊಂದು ವಾಹನ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಉತ್ತರದ ಅನೇಕ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹಿಮಾಪಾತವಾಗುತ್ತಿದ್ದು, ಇದರಿಂದ ಹೆಚ್ಚಿನ ಅಫಘಾತಗಳಾಗುತ್ತಿವೆ.   

ಕಳೆದೊಂದು ವಾರದಲ್ಲಿ ಹರ್ಯಾಣ ರಾಷ್ಟ್ರೀಯ ಹೆದ್ದಾರಿಯಲ್ಲಿ 50ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. 

ಉತ್ತರದ ಅನೇಕ ರಾಜ್ಯಗಳಲ್ಲಿ ಹಿಮಪಾತದಿಂದಾಗಿ ಉಷ್ಣಾಂಶ ಅತ್ಯಂತ ಕನಿಷ್ಟ ಪ್ರಮಾಣಕ್ಕೆ ಇಳಿಯುತ್ತಿದೆ.  ಜನಜೀವನ ಅಸ್ತವ್ಯಸ್ತವಾಗುತ್ತಿದೆ. ರಸ್ತೆಗಳಲ್ಲಿ ವಾಹನ ಸಂಚಾರವೂ ಕೂಡ ದುಸ್ಥರವಾಗುತ್ತಿದೆ.

Follow Us:
Download App:
  • android
  • ios