ಪ್ರಸಕ್ತ ವರ್ಷವೊಂದರಲ್ಲೇ ತನಿಖಾ ತಂಡವು 50 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ತೆಲಂಗಾಣ ಹಾಗೂ ಮಹರಾಷ್ಟ್ರದಿಂದ ತಲಾ 11 ಮಂದಿ, ಕರ್ನಾಟಕದಿಂದ 7 ಜನ, ಕೇರಳದಿಂದ 6, ಉತ್ತರಖಂಡದಿಂದ 4, ಉತ್ತರಪ್ರದೇಶ ಮತ್ತು ತಮಿಳುನಾಡಿನಿಂದ 2 ಹಾಗೂ ಮಧ್ಯಪ್ರದೇಶ, ಬಿಹಾರ ಹಾಗೂ ಜಮ್ಮು-ಕಾಶ್ಮೀರದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಅಹಿರ್ ತಿಳಿಸಿದ್ದಾರೆ.
ನವದೆಹಲಿ(ನ.22): ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕುತ್ತಿರುವ ಐಸಿಸ್ ಉಗ್ರ ಸಂಘಟನೆಗೆ ಸಹಾಯ ಮಾಡುತ್ತಿದ್ದ 68 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
'ರಾಷ್ಟ್ರೀಯ ತನಿಖಾ ದಳ ಹಾಗೂ ರಾಜ್ಯ ರಕ್ಷಣಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ವಿವಿಧ ಭಾಗಗಳಿಂದ ಐಸಿಸ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಆರೋಪದಡಿ ಇಲ್ಲಿಯವರೆಗೆ 68 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹಖಾತೆ ಸಚಿವ ಹನ್ಸ್'ರಾಜ್ ಅಹಿರ್ ತಿಳಿಸಿದ್ದಾರೆ.
ಪ್ರಸಕ್ತ ವರ್ಷವೊಂದರಲ್ಲೇ ತನಿಖಾ ತಂಡವು 50 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ತೆಲಂಗಾಣ ಹಾಗೂ ಮಹರಾಷ್ಟ್ರದಿಂದ ತಲಾ 11 ಮಂದಿ, ಕರ್ನಾಟಕದಿಂದ 7 ಜನ, ಕೇರಳದಿಂದ 6, ಉತ್ತರಖಂಡದಿಂದ 4, ಉತ್ತರಪ್ರದೇಶ ಮತ್ತು ತಮಿಳುನಾಡಿನಿಂದ 2 ಹಾಗೂ ಮಧ್ಯಪ್ರದೇಶ, ಬಿಹಾರ ಹಾಗೂ ಜಮ್ಮು-ಕಾಶ್ಮೀರದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಅಹಿರ್ ತಿಳಿಸಿದ್ದಾರೆ.
ದೇಶದ ಯುವಕರನ್ನು ದಿಕ್ಕು ತಪ್ಪಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೆಪಿಸುವ ವ್ಯಕ್ತಿಗಳ ಚಲನವಲನಗಳ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ತಪ್ಪಿತಸ್ಥರಿಗೆ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ