ಮುಂಬೈ(ಅ.6): ಕೇವಲ 33 ವರ್ಷದ ಬಾಲಿವುಡ್‌ನ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರು ಬ್ಲಾಕ್‌ಬಸ್ಟರ್ ‘ಸುಲ್ತಾನ್’ ಚಿತ್ರದಿಂದ 600 ಕೋಟಿ ಬಾಚಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಖ್ಯಾತಿ ಸುಲ್ತಾನ್ ಚಿತ್ರಕ್ಕೆ ಸಿಕ್ಕಿದೆ. ವಿಶೇಷವೆಂದರೆ ಚಿತ್ರರಂಗ ಹಾಗೂ ಕುಟುಂಬದ ಹಿನ್ನಲೆ ಇಲ್ಲದವರು ಇಂತಹ ಚಮತ್ಕಾರ ಮಾಡಿದ್ದಾದರೂ ಹೇಗೆ ಎಂಬುದು ಅಚ್ಚರಿ. ‘‘ಸಲ್ಮಾನ್ ಖಾನ್ ಒಪ್ಪಿಗೆ ಇಲ್ಲದಿದ್ದರೆ ಈ ಚಿತ್ರ, ಇಂತಹ ಭರ್ಜರಿ ಯಶಸ್ವಿ ಯಾವುದೂ ಸಾಧ್ಯವಾಗುತ್ತಿರಲಿಲ್ಲ,’’ ಎನ್ನುತ್ತಾರೆ ಅಬ್ಬಾಸ್. ತನ್ನ ನಿರ್ದೇಶನದ ಮೊದಲ ಚಿತ್ರದಲ್ಲಿ ನಟಿಸಿದ್ದ ನಟಿ ಕತ್ರೀನಾ ತನ್ನ ಸಾಧನೆಯ ಹಾದಿಗೆ ಸಹಕಾರ ನೀಡಿದ್ದಾರೆ ಎಂದು ಈ ವೇಳೆ ಅಬ್ಬಾಸ್ ನೆನಪಿಸಿಕೊಂಡಿದ್ದಾರೆ.