ಮಧ್ಯ ಪ್ರದೇಶದಲ್ಲಿ 60 ಲಕ್ಷ ಬೋಗಸ್ ಮತದಾರರು; ಬಿಜೆಪಿ ಕೈವಾಡ?

60 lakh Fake Voter cards found in Madhya Pradesh
Highlights

ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ಅಕ್ರಮವಾಗಿ 60 ಲಕ್ಷ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ನವದೆಹಲಿ (ಜೂ. 04): ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ೬೦ ಲಕ್ಷ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೇಂದ್ರ
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇದರ ಬೆನ್ನಲ್ಲೇ, ಈ ಕುರಿತು ಕೇಂದ್ರ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದ್ದು, ತನಿಖಾ ಸಮಿತಿಯೊಂದನ್ನು ರಚಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ ನಾಥ್ ನೇತೃತ್ವದ ನಿಯೋಗ, ಭಾನುವಾರ ಕೇಂದ್ರ ಚುನಾವಣಾ ಆಯೋಗಕ್ಕೆ 60 ಲಕ್ಷ ಬೋಗಸ್ ಮತದಾರರ ಸಂಬಂಧ ದೂರು ಸಲ್ಲಿಸಿದರು. ಅಲ್ಲದೆ, ಈ ಸಂಬಂಧ ಆಯೋಗಕ್ಕೆ ಸಾಕ್ಷ್ಯವನ್ನು ಸಹ ಕಲ್ಪಿಸಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ದೂರು ಸಲ್ಲಿಕೆ ಬಳಿಕ ಮಾತನಾಡಿದ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ ನಾಥ್, ‘ಮಧ್ಯಪ್ರದೇಶದ ಮತದಾರರ ಗುರುತಿನ ಚೀಟಿಯಲ್ಲಿ ಸುಮಾರು 60 ಲಕ್ಷ ಮಂದಿ ನಕಲಿ ಮತದಾರರು ನೋಂದಣಿ ಮಾಡಿಸಿಕೊಂಡಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಒದಗಿಸಲಾಗಿದೆ. ಈ ಹೆಸರುಗಳನ್ನು  ಉದ್ದೇಶಪೂರ್ವಕವಾಗಿಯೇ ಸೇರಿಸಲಾಗಿದೆ.

ಇದು ಆಡಳಿತದ ನಿರ್ಲಕ್ಷ್ಯವಲ್ಲ. ಆದರೆ, ಆಡಳಿತದ ದುರುಪಯೋಗ,’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ‘ಕಳೆದ 10 ವರ್ಷಗಳಲ್ಲಿ ಶೇ.24 ರಷ್ಟು ಮಂದಿ ಹೆಚ್ಚಳವಾಗಿದ್ದಾರೆ. ಆದರೆ, ಇದೇ ವೇಳೆ ಶೇ.40 ರಷ್ಟು ಮತದಾರರ ಗುರುತಿನ ಚೀಟಿ ಹೆಚ್ಚಾಗಿವೆ. ಈ ಅಕ್ರಮ ನಕಲಿ ಗುರುತಿನ ಚೀಟಿ ಹಿಂದೆ ಬಿಜೆಪಿಯ ಕೈವಾಡವಿದೆ,’ ಎಂದು ದೂರಿದರು.  

loader