ಗುಜರಿ ವಸ್ತುಗಳ ಮಧ್ಯೆಯಿದ್ದ ಹಳೆಯ ಜೀವಂತ ಬಾಂಬ್ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬಲಿ ಪಡೆದಿದೆ.

ಹನೋಯ್(ಆ.19): ಅಮೆರಿಕಾವು 1975ರ ಯುದ್ದದ ಸಮಯದಲ್ಲಿ ವಿಯೆಟ್ನಾಂ ಮೇಲೆ ಹಾಕಿದ್ದ ಬಾಂಬ್ 42 ವರ್ಷಗಳ ಬಳಿಕ ಸಿಡಿದು ಆರು ಮಂದಿಯನ್ನು ಬಲಿಪಡೆದ ದುರ್ಘಟನೆ ಹನೋಯಿನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಗುಜರಿ ವಸ್ತುಗಳ ಮಧ್ಯೆಯಿದ್ದ ಹಳೆಯ ಜೀವಂತ ಬಾಂಬ್ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬಲಿ ಪಡೆದಿದೆ. ಘಟನೆ ಕುರಿತಂತೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

1975ರಲ್ಲಿ ಅಮೆರಿಕಾವು ಯುದ್ದ ವಿಮಾನಗಳ ಮೂಲಕ ವಿಯೆಟ್ನಾಂ ಮೇಲೆ ಹಾಕಿದ ಬಾಂಬ್'ನಿಂದ ಸರ್ಕಾರಿ ವರದಿ ಪ್ರಕಾರ, 42 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 62,100 ಮಂದಿ ಗಾಯಗೊಂಡಿದ್ದರು.