ಬೆಂಗಳೂರು: ಅರಬ್ ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಟ್ ಏರ್‌ವೆಸ್ ವಿಮಾನದ ಶೌಚಾಲಯದಲ್ಲಿ ಗುರುವಾರ ಸುಮಾರು 6.650  ಕೇಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅರಬ್ ದೇಶದಿಂದ ಕಳ್ಳ ಹಾದಿಯಲ್ಲಿ ಚಿನ್ನ ತಂದಿರುವ ಸ್ಮಗ್ಲರ್ಸ್‌ಗಳು, ವಿಮಾನ ನಿಲ್ದಾಣದ ಭದ್ರತಾ ಕೋಟೆ ಭೇದಿಸಲಾಗದೆ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ವಿಮಾನವನ್ನು ತಪಾಸಣೆಗೊಳಪಡಿಸಿದಾಗ ಚಿನ್ನ ಪತ್ತೆಯಾಗಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಮಸ್ಕಟ್ ದೇಶದಿಂದ ಆಗಮಿಸುತ್ತಿರುವ ಜೆಟ್ ಏರ್‌ವೆಸ್ ವಿಮಾನದಲ್ಲಿ ಕೋಟ್ಯಂತರ ರು. ಮೌಲ್ಯದ ಚಿನ್ನ ಸಾಗಾಣಿಕೆ ಬಗ್ಗೆ ಮಾಹಿತಿ ಸಿಕ್ಕಿತು.

ಅದರಂತೆ ಆ ವಿಮಾನದ ಮೇಲೆ ನಿಗಾ ವಹಿಸಿ, ವಿಮಾನ ನಿಲ್ದಾಣದಲ್ಲಿ ಇಳಿಯಲು ಕಾಯುತ್ತಿದ್ದವು. ಆ ವೇಳೆಗೆ ಎಚ್ಚೆತ್ತು ಆರೋಪಿಗಳು ಚಿನ್ನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.