ಕಬಿನಿ ಡ್ಯಾಂಗೆ ಒಳ ಹರಿವು ಹೆಚ್ಚಾದ ಹಿನ್ನಲೆ50 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಡ್ಯಾಂನ ಎಇಇ ಪುಟ್ಟ ಶೇಷಗಿರಿಯಿಂದ ಮಾಹಿತಿನದಿ ಪ್ರದೇಶದ ಜನರಿಗೆ ಸೂಚನೆ‌ ನೀಡಿದ‌ ಎಇಇ

ಮೈಸೂರು(ಜು.11): ಕಬಿನಿ ಡ್ಯಾಂಗೆ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಕಬಿಬಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಬಿನಿ ಡ್ಯಾಂನ ಎಇಇ ಪುಟ್ಟ ಶೇಷಗಿರಿ, ಕಬಿಬಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿದ್ದು, ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಹಾಗೂ ಜಾನುವಾರು ಬಗ್ಗೆ ಜಾಗೃತಿವಹಿಸಬೇಕೆಂದು ಮನವಿ ಮಾಡಿದ್ದಾರೆ.

ಈಗಾಗಲೇ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇದೀಗ ಡ್ಯಾಂನಿಂದ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿರುವುದು ನದಿ ಪ್ರದೇಶದ ಜನರಿಗೆ ಆತಂಕ ತಂದಿಟ್ಟಿದೆ.