ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್‌ನಲ್ಲಿ ಬರುವ ಗಡಿನಿಯಂತ್ರಣಾ ರೇಖೆ ಬಳಿ ಭಾರೀ ಪ್ರಮಾಣದ ಹಿಮಪಾತವಾಗುತ್ತಿದ್ದು, ಈ ಪ್ರದೇಶದಲ್ಲಿ ರಕ್ಷಣಾ ನಿರತ 5 ಯೋಧರು ನಾಪತ್ತೆಯಾಗಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್‌ನಲ್ಲಿ ಬರುವ ಗಡಿನಿಯಂತ್ರಣಾ ರೇಖೆ ಬಳಿ ಭಾರೀ ಪ್ರಮಾಣದ ಹಿಮಪಾತವಾಗುತ್ತಿದ್ದು, ಈ ಪ್ರದೇಶದಲ್ಲಿ ರಕ್ಷಣಾ ನಿರತ 5 ಯೋಧರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ಭದ್ರತಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ, ‘ನೌಗ್ರಾಮ್ ಸೆಕ್ಟರ್’ನಲ್ಲಿ ಇಬ್ಬರು ಯೋಧರು ಇಳಿಜಾರು ಪ್ರದೇಶಕ್ಕೆ

ಮುಗ್ಗರಿಸಿದ್ದಾರೆ. ಅಲ್ಲದೆ, ಕುಪ್ವಾರ ಜಿಲ್ಲೆಯ ಗುರೆಜ್ ಸೆಕ್ಟರ್‌ನಲ್ಲಿ 24 ಗಂಟೆಗಳಿಂದ ಭಾರೀ ಪ್ರಮಾಣದಲ್ಲಿ ಹಿಮಪ್ರವಾಹವಾಗುತ್ತಿರುವ ಸಂದರ್ಭದಲ್ಲೇ ಮೂವರು ಯೋಧರು ಕಾಣೆಯಾಗಿದ್ದಾರೆ. ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ,’ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಭಾರೀ ಹಿಮಪಾತ, ಹೆದ್ದಾರಿ ಬಂದ್: ಜಮ್ಮು-ಕಾಶ್ಮೀರದಲ್ಲಿ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುತ್ತಿದ್ದು, ಪರಿಣಾಮ ಶ್ರೀನಗರದ ವಿಮಾನ ನಿಲ್ದಾಣ ಮುಚ್ಚಲಾಗಿದೆ.