ಸೈನಿಕರಿಂದ ಕೊಲ್ಲಲ್'ಪಟ್ಟ ಉಗ್ರರು ಲಷ್ಕರ್ ಈ ತಯ್ಯಬಾ ಸಂಘಟನೆಯವರಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತಿದೆ.
ಶ್ರೀನಗರ(ನ.18): ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತ್ಯೆಗೀಡಾಗಿ ಓರ್ವ ವಾಯುದಳದ ಕಮಾಂಡೊ ಹುತಾತ್ಮನಾಗಿದ್ದಾನೆ.
ಗುಪ್ತದಳದ ಮಾಹಿತಿ ಮೇರೆಗೆ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೇನಾಪಡೆ ಕಾರ್ಯಾಚರಣೆ ಕೈಗೊಂಡಾದ ಉಗ್ರರಿರುವುದು ಪತ್ತೆಯಾಯಿತು. ಈ ಸಂದರ್ಭದಲ್ಲಿ ಇಬ್ಬರ ನಡುವೆ ನಡೆದ ಕಾಳಗದಲ್ಲಿ ಐವರು ಉಗ್ರರು ಹತ್ಯೆಗೀಡಾದರೆ ಭಾರತೀಯ ವಾಯದಳದ ಓರ್ವ ಸೈನಿಕ ಹುತಾತ್ಮನಾಗಿದ್ದು, ರಾಷ್ಟ್ರೀಯ ರೈಫಲ್'ನ ಮತ್ತೋರ್ವ ಗಾಯಗೊಂಡಿದ್ದಾನೆ.
ಸೈನಿಕರಿಂದ ಕೊಲ್ಲಲ್'ಪಟ್ಟ ಉಗ್ರರು ಲಷ್ಕರ್ ಈತಯ್ಯಬಾಸಂಘಟನೆಯವರಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತಿದೆ.
