ಸ್ವಿಫ್ಟ್ ಕಾರಿನಲ್ಲಿ 5 ಮಂದಿ ಬರುತ್ತಿದ್ದಾಗ ಬೆಂಗಳೂರು- ಕನಕಪುರ ಹೆದ್ದಾರಿಯ ಹುಕ್ಕೆಗೌಡನದೊಡ್ಡಿ ಗ್ರಾಮದ ಬಳಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನಕಪುರ(ಜು.11): ತಾಲೂಕಿನ ಹುಕ್ಕೆಗೌಡನದೊಡ್ಡಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ 5 ಮಂದಿ ಬರುತ್ತಿದ್ದಾಗ ಬೆಂಗಳೂರು- ಕನಕಪುರ ಹೆದ್ದಾರಿಯ ಹುಕ್ಕೆಗೌಡನದೊಡ್ಡಿ ಗ್ರಾಮದ ಬಳಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.