Asianet Suvarna News Asianet Suvarna News

5 ಉಪಚುನಾವಣೆ ಮತದಾನ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಐದು ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ನಡೆದ ಉಪಚುನಾವಣೆ ಮತದಾನ ಮುಕ್ತಾಯವಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಎಷ್ಟೆಷ್ಟು ಶೇಖಡ ಮತದಾನವಾಗಿದೆ?ಇಲ್ಲಿದೆ ವಿವರ.

5 Karnataka bypolls ends here is percentage of voting
Author
Bengaluru, First Published Nov 3, 2018, 7:45 PM IST

ಬೆಂಗಳೂರು, [ನ.03]: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯವಾಗಿದೆ.

ಇಂದು [ಶನಿವಾರ]  ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭೆಗೆ ಮತದಾನ ನಡೆದರೆ, ಜಮಖಂಡಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ  ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೂ ಮತದಾನ ಪ್ರಕ್ರಿಯೆ ನಡೆದಿದ್ದು. ಬಹುತೇಕ ಎಲ್ಲ ಕಡೆ ಶಾಂತಿಯುತ ಮತದಾನವಾಗಿದೆ. 

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಅಡಗಿದ್ದು, ಇದೇ ನವೆಂಬರ್ 6 ಮಂಗಳವಾರದಂದು ಹೊರ ಬೀಳಲಿದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ? ಸ್ಥಳೀಯ ಚುನಾವಣಾಧಿಕಾರಿ ಮಾಹಿತಿ ಪ್ರಕಾರ ಶೇಕಡಾವಾರು ಮತದಾನದ ಮಾಹಿತಿ ಇಲ್ಲಿದೆ.

ಸುವರ್ಣ ನ್ಯೂಸ್ ಗೆ ಆಯಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ

* ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡ 63.85ರಷ್ಟು ಮತದಾನ.
* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡ 53.93ರಷ್ಟು ಮತದಾನ. 
* ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡ 61.05ರಷ್ಟು ಮತದಾನ.
* ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 71.88ರಷ್ಟು ಮತದಾನ.
* ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ  ಶೇಕಡ 77.17ರಷ್ಟು ಮತದಾನ.

Follow Us:
Download App:
  • android
  • ios