ಹೂ ಮಾರುವ ಮಹಿಳೆ ಲೀಲಾ, ಮೈಸೂರಿನ ಹುಲ್ಲಹಳ್ಳಿಯ ಕಾರ್ಪೊರೇಶನ್ ಬ್ಯಾಂಕ್`ನಲ್ಲಿ ಅಕಛಂಟ್ ಹೊಂದಿದ್ದಾರೆ. ನಿನ್ನೆ ಬ್ಯಾಂಕ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಕೌಂಟಿನ ವಹಿವಾಟನ್ನ ತಡೆಹಿಡಿದಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಮೈಸೂರು(ಜ.12): ನೋಟ್ ಬ್ಯಾನ್ ಬಳಿಕ ಹಣ ಡೆಪಾಸಿಟ್ ಮಾಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಿದೆ. ಕೆಲವೊಮ್ಮೆ ಅಪರಿಚಿತ ಅಕೌಂಟಿಗಳಿಗೂ ಕೋಟಿ ಕೋಟಿ ಹಣ ಬಿದ್ದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ, ಮೈಸೂರಿನ ಹುಲ್ಲಹಳ್ಳಿಯ ಹೂ ಮಾರುವ ಮಹಿಳೆ ಲೀಲಾ ಎಂಬುವವರ ಅಕೌಂಟಿಗೂ 5.81 ಕೋಟಿ ರೂಪಾಯಿ ಹಣ ಬಿದ್ದಿರುವುದು ಬೆಳಕಿಗೆ ಬಂದಿದೆ.